Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

26 ವರ್ಷಕ್ಕೆ ಕೊನೆಯುಸಿರೆಳೆದ ಮಾಜಿ ವಿಶ್ವ ಸುಂದರಿ ಶೆರಿಕಾ ಡಿ ಅರ್ಮಾಸ್

1

ನ್ಯೂಯಾರ್ಕ್ : 2015 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಮಾಜಿ ವಿಶ್ವ ಸುಂದರಿ ಶೆರಿಕಾ ಡಿ ಅರ್ಮಾಸ್ ಅವರು ಅಕ್ಟೋಬರ್ 13 ರಂದು ಕೊನೆಯುಸಿರೆಳೆದಿದ್ದಾರೆ. ಆವರಿಗೆ 26 ವರ್ಷ ವಯಸ್ಸಾಗಿತ್ತು.

ಶೆರಿಕಾ ಸಾವಿನ ಸುದ್ದಿಯಿಂದ ಅಭಿಮಾನಿಗಳು ಶಾಕ್ ಆಗಿದ್ದು, ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅರ್ಮಾಸ್ ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ನಲ್ಲಿ ವರದಿಯಾಗಿದೆ. ಅರ್ಮಾಸ್ ಅವರು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು.

Advertisement. Scroll to continue reading.

ಆಕೆಯ ಸಾವು ಉರುಗ್ವೆ ಮತ್ತು ಪ್ರಪಂಚದಾದ್ಯಂತ ಆಘಾತವನ್ನು ಉಂಟುಮಾಡಿದೆ. ಆಕೆಯ ಸಹೋದರ ಮೈಕ್ ಡಿ ಅರ್ಮಾಸ್ ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ.

ಶೆರಿಕಾ ಡಿ ಅರ್ಮಾಸ್ ಅವರು ಉದ್ಯಮಿಯೂ ಆಗಿದ್ದು, ‘ಶೇ ಡಿ ಅರ್ಮಾಸ್ ಬ್ಯೂಟಿ ಸ್ಟುಡಿಯೋಸ್’ ಸ್ಥಾಪಿಸಿದ್ದರು. ಶೇ ಡಿ ಅರ್ಮಾಸ್ ಸ್ಟುಡಿಯೋ ಹೆಸರಿನಲ್ಲಿ ಕೂದಲು ಮತ್ತು ವೈಯಕ್ತಿಕ ಆರೈಕೆ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಿದರು. ತಮ್ಮ ಸಮಯವನ್ನು ಪೆರೆಜ್ ಸ್ಕ್ರೀಮಿನಿ ಫೌಂಡೇಶನ್‌ಗೆ ಮೀಸಲಿಟ್ಟಿದ್ದರು ಶೆರಿಕಾ. ಈ ಫೌಂಡೇಶನ್‌ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!