Connect with us

Hi, what are you looking for?

Diksoochi News

ಸಿನಿಮಾ

₹699 ಪಾಸ್ ಖರೀದಿಸಿ‌ ತಿಂಗಳಿಗೆ 10 ಸಿನಿಮಾ ವೀಕ್ಷಿಸಿ: ಪಿವಿಆರ್ ಭರ್ಜರಿ ಆಫರ್

1

ನವದೆಹಲಿ : ಸಿನಿಮಾ ನೋಡೋದಂದ್ರೆ ಹೆಚ್ಚಿನವರಿಗೆ ಇಷ್ಟನೇ…ಬ್ಯುಸಿ ಲೈಫ್‌ನಲ್ಲಿ ಸಿನಿಮಾ ನೋಡಿ ಮನರಂಜನೆ ತಗೋಳೋಣ ಅನ್ನೋರೇ ಹೆಚ್ಚು…ಇಂತಹ ಸಿನಿಅಭಿಮಾನಿಗಳಿಗೆ ಪಿವಿಆರ್ ಗುಡ್‌ನ್ಯೂಸ್ ಕೊಟ್ಟಿದೆ. ಹೌದು, ಭಾರತದ ಪ್ರಮುಖ, ಜನಪ್ರಿಯ ಸಿನಿಮಾ ಹಾಲ್ ಆದ ಪಿವಿಆರ್ ಐನಾಕ್ಸ್ ಲಿಮಿಟೆಡ್ ಸಿನಿಮಾ ಪ್ರಿಯರಿಗೆ ಸಂತಸದ ಸುದ್ದಿ ನೀಡಿದೆ.

ಹೊಸದಾಗಿ ಸಿನಿಮಾ ಪ್ರಿಯರಿಗೆ ಮಾಸಿಕ ಚಂದಾದಾರಿಕೆಯ ಪಾಸ್ ಅನ್ನು ಆರಂಭ ಮಾಡುವುದಾಗಿ ಪಿವಿಆರ್ ಐನಾಕ್ಸ್ ಹೇಳಿದೆ.


ಅಕ್ಟೋಬರ್ 16 ರಿಂದ ಈ ಮಾಸಿಕ ಚಂದಾದಾರಿಕೆ ಪಾಸ್ ಲಭ್ಯವಾಗುತ್ತಿದೆ. ಸಿನಿಮಾ ಪ್ರೇಕ್ಷಕರು ತಿಂಗಳಿಗೆ 10 ಚಲನಚಿತ್ರಗಳನ್ನು ಕೇವಲ 699 ರೂಪಾಯಿಗೆ ನೋಡಲು ಸಾಧ್ಯವಾಗುತ್ತದೆ. ಈ ಆಫರ್ ಸೋಮವಾರದಿಂದ ಗುರುವಾರದವರೆಗೆ ಮಾತ್ರ ಅನ್ವಯವಾಗುತ್ತದೆ. ಹಾಗೆಯೇ ಐಮಾಕ್ಸ್, ಚಿನ್ನ, ಲಕ್ಸ್ ಸೇರಿದಂತೆ ಕೆಲವು ಪ್ರೀಮಿಯಂ ಟಿಕೆಟ್‌ಗಳು ಇದರಲ್ಲಿ ಸೇರ್ಪಡೆಯಾಗಲ್ಲ.

Advertisement. Scroll to continue reading.

ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಕೊ-ಸಿಇಒ ಗೌತಮ್ ದತ್ತಾ ಈ ಬಗ್ಗೆ ಮಾತನಾಡಿ, “ಕಂಪನಿಯು ತಮ್ಮ ಚಲನಚಿತ್ರ ನೋಡುವ ಅಭ್ಯಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗ್ರಾಹಕರೊಂದಿಗೆ ತೊಡಗಿಸಿಕೊಂಡಿದೆ. ಗ್ರಾಹಕರು ನಾವು ಚಲನಚಿತ್ರದ ಅನುಭವ ಇಷ್ಟಪಡುತ್ತೇವೆ ಮತ್ತು ನಾವು ಚಿತ್ರಮಂದಿರಕ್ಕೆ ಬರಲು ಇಷ್ಟಪಡುತ್ತೇವೆ ಎಂದು ಹೇಳುತ್ತಿದ್ದಾರೆ,” ಎಂದು ತಿಳಿಸಿದರು.

“ಜನರ ಮನಸ್ಸಿನಲ್ಲಿ ‘ಪಠಾಣ್’, ‘ಜವಾನ್’, ‘ಸಲಾರ್’, ‘ಲಿಯೋ’, ಕೆಲವು ದೊಡ್ಡ ಸಿನಿಮಾ ಚಿತ್ರಗಳು ಇದೆ. ಆದರೆ ಸ್ವಲ್ಪ ಸಮಯ ಕಾಯಲು ಮನಸ್ಸಿಲ್ಲ. ಆದ್ದರಿಂದ ನಾವು ತನಿಖೆ ನಡೆಸಿದಾಗ, ‘ನೀವು ಪ್ರತಿ ವಾರ ಸಿನಿಮಾ ಹಾಲ್‌ಗೆ ಏಕೆ ಬರಬಾರದು? ಎಂದು ನಾವು ಗ್ರಾಹಕರಲ್ಲಿ ಕೇಳಿದೆವು. ಆಗ ಗ್ರಾಹಕರು ದುಬಾರಿಯಾಗುತ್ತದೆ ಎಂದಿದ್ದಾರೆ” ಎಂದು ತಿಳಿಸಿದರು.

ನಾವು ಗ್ರಾಹಕರ ಭಾವನೆಯೊಂದಿಗೆ ಕೆಲಸ ಮಾಡುವ ಒಂದು ರೀತಿಯ ಉತ್ಪನ್ನವನ್ನು ಹೊಂದಿರಬೇಕು. ಅದು ಅವರನ್ನು ಮತ್ತೆ ಚಿತ್ರರಂಗಕ್ಕೆ ಮರಳಿ ತರುತ್ತದೆ. ಇದು ಉತ್ತಮವಾದ ಸಣ್ಣ ಚಲನಚಿತ್ರಗಳಿಗೆ ಆದ್ಯತೆ ನೀಡಲ್ಲ. ನಮ್ಮಲ್ಲಿ ಸುಮಾರು 13 ರಿಂದ 16 ಚಿತ್ರಗಳಿವೆ. ಅದು ಪ್ರತಿ ವಾರ ಬಿಡುಗಡೆಯಾಗುತ್ತದೆ,” ಎಂದು ಮಾಹಿತಿ ನೀಡಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!