WORLDCUP : ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ ತಂಡ ಮಹತ್ವದ ಗೆಲುವು ಸಾಧಿಸಿದೆ.
ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ 245 ರನ್ ಗಳ ಸಾಧಾರಣ ಗುರಿಯನ್ನು ದ.ಆಫ್ರಿಕಾಗೆ ನೀಡಿತ್ತು. ಆದರೆ, ಈ ಗುರಿ ಬೆನ್ನತ್ತಲು ಆಗದೆ ದಕ್ಷಿಣ ಆಫ್ರಿಕಾ ತಂಡ ಮುಗ್ಗರಿಸಿದೆ.
ಮಳೆಯಿಂದಾಗಿ ಕೇವಲ 43 ಓವರ್ ಗಳಿಗೆ ಸೀಮಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 245 ರನ್ ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್‌ನ ಸಾಂಘಿಕ ಬೌಲಿಂಗ್ ಪ್ರದರ್ಶನಕ್ಕೆ ತರಗೆಲೆಗಳಂತೆ ದಕ್ಷಿಣ ಆಫ್ರಿಕಾದ ವಿಕೆಟ್‌ಗಳು ಉರುಳಿದವು.
ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 43 ಓವರ್ ನಲ್ಲಿ 207 ರನ್ ಗಳಿಗೆ ಆಲೌಟ್ ಆಗುವ ಮೂಲಕ 38 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ನೆದರ್ಲೆಂಡ್ ಪರ ಲೋಗಾನ್ ವ್ಯಾನ್ ಬೀಕ್, ಪಾಲ್ ವ್ಯಾನ್ ಮೀಕೆರೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಬಾಸ್ ಡಿ ಲೀಡೆ ತಲಾ 2 ವಿಕೆಟ್ ಪಡೆದರೆ, ಕಾಲಿನ್ ಅಕರ್ಮನ್ 1 ವಿಕೆಟ್ ಪಡೆದರು.

