Connect with us

Hi, what are you looking for?

Diksoochi News

ಸಿನಿಮಾ

ನಾವು ಬೇರ್ಪಡುತ್ತಿದ್ದೇವೆ….ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೋಸ್ಟ್; ಏನಿದರ ಅಸಲಿಯತ್ತು ಗೊತ್ತಾ?

1

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜ್ ನಟನಾ ಲೋಕಕ್ಕೆ ಕಾಲಿಡುತ್ತಿದ್ದು, ತಮ್ಮ ಹೊಸ ಚಿತ್ರದ ಕುರಿತು ಇತ್ತೀಚೆಗಷ್ಟೆ ಅನೌನ್ಸ್ ಮಾಡಿದ್ದರು. ಯುಟಿ69 ಚಿತ್ರದ ತಯಾರಿಯಲ್ಲಿದ್ದರು.

ಈ ಚಿತ್ರದ ಪ್ರಚಾರದ ನಡುವೆ ರಾಜ್ ಕುಂದ್ರಾ ಶಾಕ್ ಕೊಟ್ಟಿದ್ದಾರೆ. ಹೌದು, ಇದನ್ನು ನೋಡಿ ಅಭಿಮಾನಿಗಳು ನಿಬ್ಬೆರಗಾಗಿದ್ದರು.

Advertisement. Scroll to continue reading.

“ನಾವು ಬೇರ್ಪಟ್ಟಿದ್ದೇವೆ ಮತ್ತು ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಸಮಯ ನೀಡುವಂತೆ ನಿಮ್ಮೆಲ್ಲರನ್ನೂ ವಿನಂತಿಸುತ್ತೇವೆ. ” ಎಂದು ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನವೆಂಬರ್ 2009 ರಲ್ಲಿ ವಿವಾಹವಾದರು. ಅವರು ಮದುವೆಯಾಗಿ 14 ವರ್ಷಗಳನ್ನು ಪೂರೈಸಿದ್ದಾರೆ. ಇವರಿಬ್ಬರು ಬೇರ್ಪಡುತ್ತಿದ್ದಾರಾ ಎಂಬ ಚಿಂತೆ ಅಭಿಮಾನಿಗಳಲ್ಲಿ ಕಾಡಿತ್ತು. ಈ ಪೋಸ್ಟ್ ಶಾಕ್ ನೀಡಿತ್ತು.

ಆದರೆ, ಇನ್ನೊಂದು ಪೋಸ್ಟ್‌ ಹರಿಬಿಟ್ಟಿದ್ದಾರೆ ರಾಜ್ ಕುಂದ್ರಾ, ಫೇರ್‌ವೆಲ್ ಮಾಸ್ಕ್‌ಗಳು …ಈಗ ಬೇರ್ಪಡಿಸುವ ಸಮಯ! ಕಳೆದ ಎರಡು ವರ್ಷಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಪ್ರಯಾಣದ ಮುಂದಿನ ಹಂತ #UT69 ಎಂದು ಬರೆದುಕೊಂಡಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!