ಉತ್ತರಪ್ರದೇಶ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದೊಳಗಿನ ಕೆತ್ತನೆಗಳ ಕೆಲವು ಫೋಟೋಗಳನ್ನು ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಶನಿವಾರ ಬಿಡುಗಡೆ ಮಾಡಿದೆ.
ಎಕ್ಸ್ ಪೋಸ್ಟ್ನಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಟ್ರಸ್ಟ್, “ಶ್ರೀ ರಾಮ್ ಜನ್ಮಭೂಮಿ ಮಂದಿರದೊಳಗಿನ ಕೆತ್ತನೆಗಳು” ಎಂದು ಬರೆದಿದೆ.
Carvings inside Shri Ram Janmabhoomi Mandir.
श्री राम जन्मभूमि मंदिर के भीतर नक्काशी का कार्य pic.twitter.com/sFfUbWLBHv— Shri Ram Janmbhoomi Teerth Kshetra (@ShriRamTeerth) October 28, 2023
2024 ರ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭವು ಮಧ್ಯಾಹ್ನ 12.30ರ ಸುಮಾರಿಗೆ ನಡೆಯುವ ಸಾಧ್ಯತೆಯಿದೆ. ಭಗವಂತ ರಾಮನ ವಿಗ್ರಹವನ್ನು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು.

ಮೂರು ಅಂತಸ್ತಿನ ದೇವಾಲಯದ ನೆಲಮಹಡಿ ಕೆಲಸ ಪೂರ್ಣಗೊಂಡಿದೆ. ಜನವರಿ 14 ರಂದು ರಾಮ್ ಲಲ್ಲಾ ಪ್ರತಿಷ್ಠಾಪನಾ ಪ್ರಕ್ರಿಯೆಯನ್ನ ಪ್ರಾರಂಭಿಸಲಿದೆ.