ತಿರುವನಂತಪುರ: ಜನಪ್ರಿಯ ಮಲಯಾಳಂ ನಟಿ ರೆಂಜೂಷಾ ಮೆನನ್(35) ಅವರು ಸೋಮವಾರ ತಿರುವನಂತಪುರಂನಲ್ಲಿರುವ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತನ್ನ ಕುಟುಂಬದೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ರೆಂಜೂಷಾ ಸೋಮವಾರ ಬೆಳಗ್ಗೆ ಎಷ್ಟು ಹೊತ್ತಾದರೂ ರೂಮಿನ ಬಾಗಿಲು ತೆಗೆಯದ ಕಾರಣ ಮನೆಯವರಿಗೆ ಅನುಮಾನ ಬಂದಿತ್ತು. ಬಳಿಕ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ.

ನಟಿ, ನೃತ್ಯಗಾರ್ತಿ :
ರೆಂಜೂಷಾ, ‘ಸಿಟಿ ಆಫ್ ಗಾಡ್’, ‘ಮರಿಕ್ಕುಂಡೋರು ಕುಂಜಾಡು’, ‘ಬಾಂಬೆ ಮಾರ್ಚ್’, ‘ಕಾರ್ಯಸ್ಥಾನ’, ‘ಒನ್ ವೇ ಟಿಕೆಟ್’, ‘ಅತ್ಭುತ ದ್ವೀಪ’ ಸೇರಿ ಅನೇಕ ದೂರದರ್ಶನ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದರೊಂದಿಗೆ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೂ ಅವರು ಬಣ್ಣ ಹಚ್ಚಿದರು.
ಹಲವು ಧಾರಾವಾಹಿಗಳಲ್ಲಿ ನಿರ್ಮಾಪಕಿ ಆಗಿಯು ಕಾರ್ಯ ನಿರ್ವಹಿಸಿದ್ದಾರೆ. ನಟನೆ ಜೊತೆಗೆ ಅವರು ವೃತ್ತಿಪರ ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದಾರೆ.
ಸಾವಿಗೂ ಮುನ್ನ ಪೋಸ್ಟ್:

ಸೋಮವಾರ ಅವರು ಸಾವಿಗೂ ಮುನ್ನ ನಟ ‘ಆನಂದ ರಾಗಂ’ ಸಹನಟಿಯಾದ ಶ್ರೀದೇವಿ ಅನಿಲ್ ಅವರೊಂದಿಗೆ ಮಾಡಿರುವ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮೆನನ್ ಅವರ ಸಾವಿನ ಸುದ್ದಿ ಅವರ ಅಭಿಮಾನಿಗಳಲ್ಲಿ ಆಘಾತ ತಂದಿದೆ. ಅದೇ ಪೋಸ್ಟ್‌ಗೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
