ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ರೋಟರಿ ಕ್ಲಬ್ ಝೋನಲ್ ಕ್ರಿಕೆಟ್ ಚಾಂಪಿಯನ್ ಶಿಪ್‌ನಲ್ಲಿ ವಿನ್ನರ್ ಆಗಿ ಮೂಡಿ ಬಂದಿದೆ.
ಭಾನುವಾರ ರೋಟರಿ ಕ್ಲಬ್ ಅಂಬಲಪಾಡಿ ಇವರ ಆತಿಥ್ಯದಲ್ಲಿ ಉಡುಪಿ ಮಿಷನ್ ಕಂಪೌಂಡ್‌ನಲ್ಲಿ ನಡೆದ ಝೋನಲ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ೮ ತಂಡಗಳು ಭಾಗವಹಿಸಿ ರೋಟರಿ ಸಾಯಿಬರ ಕಟ್ಟೆ ಸೆಮಿ ಫೈನಲ್ ಹಂತ ತಲುಪಿ, ಅಂತಿಮ ಹಣಾಹಣಿಯಲ್ಲಿ ಬಾರಕೂರು ರೋಟರಿ ಕ್ಲಬ್ ಫೈನಲ್ ಹಂತ ತಲುಪಿ ಬ್ರಹ್ಮಾವರ ರೋಟರಿ ಚಾಂಪಿಯನ್ ಆಗಿದೆ.
Advertisement. Scroll to continue reading.


ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್ ಆಫ್ ದಿ ಸಿರೀಸ್ ಆಗಿ ಬ್ರಹ್ಮಾವರ ರೋಟರಿಯ ಜೆರಾಲ್ಡ್ ಮೂಡಿ ಬಂದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಬ್ರಹ್ಮಾವರ ರೋಟರಿ ಕ್ಲಬ್‌ನ ಅಧ್ಯಕ್ಷ ರೋ. ಉದಯ್ ಕುಮಾರ್ ಶೆಟ್ಟಿ, ಬಿಎಂ ಭಟ್, ಆಲ್ವಿನ್ ಅಂದ್ರಾದೆ ಮುತ್ತಿತರು ಉಪಸ್ಥಿತರಿದ್ದರು.
In this article:brahmavara club, cricket, Diksoochi news, zonal cricket partnership
Click to comment

































