Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಮೈ-ಟೆಕ್ ತಾಂತ್ರಿಕ ಕಾಲೇಜು ವಾರ್ಷಿಕ ಕ್ರೀಡಾಕೂಟ

0

ಉಡುಪಿ : ಮೈ-ಟೆಕ್ ತಾಂತ್ರಿಕ ಸಮೂಹ ಶಿಕ್ಷಣ ಸಂಸ್ಥೆ ಶಿರ್ವ, ಕಾರ್ಕಳ, ಉಡುಪಿ, ಹಿರಿಯಡಕ, ಬ್ರಹ್ಮಾವರ ಶಾಖೆಗಳ 2023-24 ರ ಸಾಲಿನ ವಾರ್ಷಿಕ ಕ್ರೀಡಾಕೂಟವು ಮೈ-ಟೆಕ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಉದಯ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಕಾರ್ಕಳ ತಾಲೂಕು ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟವನ್ನು ಕಾರಗಕಳ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಸಾಲ್ಯಾನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿ, ಮೈ-ಟೆಕ್ ತಾಂತ್ರಿಕ ವೃತ್ತಿ ಶಿಕ್ಷಣ ಸಂಸ್ಥೆ ಕಲಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳನ್ನು ನಡೆಸಿ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಇದರಿಂದಾಗಿ ವಿದ್ಯಾರ್ಥಿಗಳು ದೈಹಿಕವಾಗಿ ಶಕ್ತರಾಗಿರಲು ಸಾಧ್ಯ ಎಂದರು.

Advertisement. Scroll to continue reading.

ಮುಖ್ಯ ಅತಿಥಿಗಳಾಗಿ ಕಾರ್ಕಳ ಉದ್ಯಮಿ ಕಂಬಳ ಪ್ರೇಮಿ ಪ್ರವೀಣ್ ಆಚಾರ್ಯ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.

ಮೈ-ಟೆಕ್ ಸಂಸ್ಥೆಯ ಶ್ರೀಮತಿ ರೇಷ್ಮಾ ಉದಯ ಆಚಾರ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಮೇಘಾನ ಭಟ್ ಸ್ವಾಗತಿಸಿ, ಸೌಜನ್ಯ ಆಚಾರ್ಯ ಪರ್ಕಳ ಧನ್ಯವಾದ ನೀಡಿದರು. ತ್ರೀಶಾ ಆಚಾರ್ಯ ಕಾಪು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಅಲೆಕ್ಸ್ ಫೆರ್ನಾಂಡಿಸ್ ಶಿರ್ವ, ವೀಕ್ಷಿತ್ ಆಚಾರ್ಯ ಸೂಡ, ನವ್ಯ ಶೆಟ್ಟಿ, ಶ್ವೇತಾ ಆಚಾರ್ಯ ಹಾಗೂ 5 ಸಂಸ್ಥೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ 100 ಮೀ, 200 ಮೀ, 800 ಮೀ, 1000 ಮೀ, ಲಾಂಗ್ ಜಂಪ್, ಹೈಜಂಪ್, ಶಾಟ್ ಪುಟ್, ಡಿಸ್ಕಸ್, 4×100 ಮೀ ರಿಲೇ, ಕ್ರಿಕೆಟ್, ವಾಲಿಬಾಲ್ ಪಂದ್ಯಾಟ ನಡೆಯಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!