ಬ್ರಹ್ಮಾವರ : ವೇಟ್ ಲಿಫ್ಟಿಂಗ್‌ನಲ್ಲಿ ಬಾರಕೂರು ಪಲ್ಲವಿ ರಾಜ್ ರಾಷ್ಟ್ರ ಮಟ್ಟಕ್ಕೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪವರ್ ಲಿಫ್ಟಿಂಗ್ ಹಾಗು ವೇಟ್ ಲಿಫ್ಟಿಂಗ್ ನ 84 ಕೆ.ಜಿ ವಿಭಾಗದಲ್ಲಿ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಪಲ್ಲವಿ ರಾಜ್ ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಅಕ್ಟೋಬರ್ 28 ಮತ್ತು 29 ರಂದು ತೂಮಕೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆ 2023 ರಾಜ್ಯದ ನಾನಾ ಭಾಗದಿಂದ ಸ್ಫರ್ಧಿಗಳು ಭಾಗವಹಿಸಿದ್ದರು.
Advertisement. Scroll to continue reading.
ಪಲ್ಲವಿ ರಾಜ್ ಬ್ರಹ್ಮಾವರ ಡೈಮಂಡ್ ಜಿಮ್ ನ ಮಹೇಶ್ ಸುವರ್ಣ ಅವರಲ್ಲಿ ತರಬೇತಿ ಪಡೆಯುತ್ತಿದ್ದು, ರಾಜ ಖಾರ್ವಿ ಅವರ ಪತ್ನಿಯಾಗಿದ್ದು ಇವರ ಸಾಧನೆಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.