Connect with us

Hi, what are you looking for?

Diksoochi News

ರಾಷ್ಟ್ರೀಯ

ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಇಸ್ರೋಗೆ ಮತ್ತೊಂದು ಯಶಸ್ಸು; ಸೂರ್ಯನ ಶಕ್ತಿ ಸ್ಫೋಟ ಸೆರೆ ಹಿಡಿದ ಆದಿತ್ಯ L1

0

ಬೆಂಗಳೂರು :  ಚಂದ್ರಯಾನ ಯಶಸ್ವಿಯಾದ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಆದಿತ್ಯ  L1 ನೌಕೆಯನ್ನು ಕಳುಹಿಸಲಾಗಿತ್ತು. ಇದೀಗ ಈ ಆದಿತ್ಯ  L1 ಸೂರ್ಯನಿಂದ ಮೊದಲ ಶಕ್ತಿ ಸ್ಫೋಟವನ್ನು ಸೆರೆ ಹಿಡಿದಿದೆ.  

ಆದಿತ್ಯ L1 ನೌಕೆಯಲ್ಲಿ 7 ಪ್ಲೇಲೋಡ್‌ಗಳಿವೆ. ಇದರಲ್ಲಿ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಪ್ಲೇಲೋಡ್ ಸೂರ್ಯ ಮೇಲ್ಮೈನಲ್ಲಿ ನಡೆಯುವ ಸೌರ ಜ್ವಾಲೆಗಳ ಹಠಾತ್ ಸ್ಫೋಟವನ್ನು ಅಕ್ಟೋಬರ್ 29 ರಂದು ದಾಖಲಿಸಿದೆ.

ಸೂರ್ಯ ಮೇಲ್ಮೈನಲ್ಲಿ ಎಕ್ಸ್ ಕಿರಣಗಳ ಬೆಳಕಿನ ರೂಪದಲ್ಲಿ ಶಕ್ತಿ ಮತ್ತು ವಿಕರಣವನ್ನು ಹೊರಸೂಸುತ್ತದೆ. ಈ ವೇಳೆ ಹಠಾತ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ತೀವ್ರತೆಗಳನ್ನು ಆದಿತ್ಯ ಎಲ್1 ದಾಖಲಿಸಿದೆ. ಸೂರ್ಯನ ಸುತ್ತಲಿನ ವಾತಾವರಣವರದಲ್ಲಿ ಸಂಗ್ರಹವಾಗಿರುವ ಕಾಂತೀಯ ಶಕ್ತಿ ಬಿಡುಗಡೆ ವೇಳೆ  ಈ ರೀತಿ ಸ್ಫೋಟಗಳು ಸಂಭವಿಸುತ್ತದೆ. ಈ ಪೈಕೆ ಕೆಲವು ತೀವ್ರ ಸ್ಫೋಟವಾಗಿದ್ದರೆ, ಕೆಲವು ಸಾಮಾನ್ಯವಾಗಿರುತ್ತದೆ. ಈ ಸ್ಫೋಟದ ತೀವ್ರತೆಯನ್ನೂ ಇಸ್ರೋ ಉಪಗ್ರಹ ದಾಖಲಿಸಿದೆ.

Advertisement. Scroll to continue reading.

ಸೆಪ್ಟೆಂಬರ್ 9 ರಂದು ಆದಿತ್ಯ ಎಲ್ 1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ನೆಲೆಯಿಂದ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಆದಿತ್ಯ ಎಲ್ 1 ನೌಕೆ ಹಾರಿಸಲಾಗಿತ್ತು. 15 ಲಕ್ಷ ಕಿಲೋಮೀಟರ್ ದೂರಕ್ಕೆ ಸಾಗಿ ಸೂರ್ಯನ ಎಲ್ 1 ಪಾಯಿಂಟ್‌ನಲ್ಲಿ ಈ ಅದಿತ್ಯ ಎಲ್ 1 ಅಧ್ಯಯನ ನಡೆಸಲಿದೆ. ಈ ದೂರ ಕ್ರಮಿಸಲು 125 ದಿನಗಳ ಅವಶ್ಯಕತೆ ಇದೆ. ಸೂರ್ಯನ ದೂರ ಭೂಮಿಯಿಂದ 15 ಕೋಟಿ ಕಿಲೋಮೀಟರ್ ಲ್ಯಾಗ್ರೇಂಜಿಯನ್‌ ಪಾಯಿಂಟ್‌’ ಅಥವಾ ಎಲ್‌1 ಎನ್ನುವುದು ಸೂರ್ಯ-ಭೂಮಿಯ ಗುರುತ್ವ ಬಲ ಸಮಾನವಾಗಿರುವ ಸ್ಥಳ. ಇಲ್ಲಿ ನೌಕೆ ನಿಯೋಜಿಸಿದರೆ ಸೂರ್ಯನನ್ನು ಗ್ರಹಣದಂಥ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಸತತವಾಗಿ ನೇರವಾಗಿ ವೀಕ್ಷಣೆ ಮಾಡಲು ಸಾಧ್ಯ. ಇದು ಹೆಚ್ಚಿನ ಇಂಧನ ವ್ಯರ್ಥಮಾಡದೇ ಸುದೀರ್ಘ ಕಾಲ ನೌಕೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ನೌಕೆಯಲ್ಲಿನ 4 ಉಪಕರಣಗಳು ಸತತವಾಗಿ ಸೂರ್ಯನನ್ನು ವೀಕ್ಷಿಸುತ್ತಾ ಮಾಹಿತಿ ಸಂಗ್ರಹಿಸಲಿದ್ದರೆ, ಉಳಿದ ಮೂರು ಉಪಕರಣಗಳು ಸ್ಥಳದಲ್ಲಿನ ಪಾರ್ಟಿಕಲ್‌ (ಕಣಗಳು) ಮತ್ತು ಪ್ರದೇಶಗಳ ಅಧ್ಯಯನ ನಡೆಸಿ ಅದರ ಮಾಹಿತಿಯನ್ನು ಭೂಮಿಗೆ ರವಾನಿಸಲಿವೆ.
 

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!