Connect with us

Hi, what are you looking for?

Diksoochi News

ಕರಾವಳಿ

ಪಡುಬಿದ್ರಿ : ಟೂತ್‌ಪೇಸ್ಟ್ ಎಂದು ಇಲಿ ಪಾಷಾಣ ಬಳಸಿದ ವ್ಯಕ್ತಿ ಸಾವು

0

ಪಡುಬಿದ್ರಿ : ಟೂತ್‌ಪೇಸ್ಟ್ ಎಂದು ಇಲಿ ಪಾಷಾಣ ಬಳಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ.

ವೆಂಕಪ್ಪ (53) ಮೃತ ವ್ಯಕ್ತಿ.

ಮನೆಗೆ ಬಂದವರು, ಮನೆಯ ಬಚ್ಚಲು ಮನೆಗೆ ಹೋಗಿ ಬ್ರಷ್ ಮಾಡಲು ಟೂತ್‌‌‌ಪೇಸ್ಟ್‌‌ ಎಂದು ಅಲ್ಲಿಯೇ ಇದ್ದ ಇಲಿ ಪಾಷಾಣವನ್ನು ಬಳಸಿದ್ದಾರೆ. ನಂತರ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಕ್ಕಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು.

Advertisement. Scroll to continue reading.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!