ಮುಂಬೈ: ಭಾರತ ತಂಡ ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ನಡುವೆ ಇದೀಗ ಬಾಲಿವುಡ್ ನಟಿ ಪಾಯಲ್ ಘೋಷ್ ಅವರು ಶಮಿಗೆ ಮದುವೆ ಆಫರ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪಾಯಲ್ ಘೋಷ್, ‘ಶಮಿ ನೀನು ನಿನ್ನ ಇಂಗ್ಲೀಷ್ ಸರಿಪಡಿಸಿಕೋ.. ನಾನು ನಿನ್ನನ್ನು ಮದುವೆಯಾಗಲು ಸಿದ್ಧ’ ಎಂದು ಬರೆದಿದ್ದಾರೆ.
#Shami Tum apna English sudharlo, I’m ready to marry you 🤣🤣— Payal Ghoshॐ (@iampayalghosh) November 2, 2023
ಪಾಯಲ್ ಘೋಷ್ 1992ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದರು. ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.

‘ವರ್ಷಧಾರೆ’, ‘ಪ್ರಯಾಣಂ’, ‘ಊಸರವೇಲಿ’, ‘ಮಿ. ರಾಸ್ಕಲ್’, ಮತ್ತು ‘ಪಟೇಲ್ ಕಿ ಪಂಜಾಬಿ ಶಾದಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಅವರು ರಾಮದಾಸ್ ಅಠಾವಳೆ ಅವರ ರಾಜಕೀಯ ಪಕ್ಷದ ಮಹಿಳಾ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.
ಇನ್ನು, ಮೊಹಮ್ಮದ್ ಶಮಿ ಅವರು 2014ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾದರು. 2015ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತು. ನಂತರ ಇವನ ವೈವಾಹಿಕ ಜೀವನ ಸಾಕಷ್ಟು ಸುದ್ದಿಯಾಗಿತ್ತು. ಹಸಿನ್ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸಿದರು. ಇದು ದೊಡ್ಡ ಸದ್ದು ಮಾಡಿತ್ತು.

