ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರ ಹೆಬ್ರಿ ಸಹಯೋಗದೊಂದಿಗೆ ದತ್ತಿ ಉಪನ್ಯಾಸ ಹಾಗೂ ಓದುವ ಬೆಳಕು ಕಾರ್ಯಕ್ರಮ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷತೆ ಶ್ರೀನಿವಾಸ ಭಂಡಾರಿ ಮುದ್ದೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗ್ರಂಥಾಲಯದ ಸಹಯೋಗದೊಂದಿಗೆ ನಡೆಸಲಾದ ಈ ಕಾರ್ಯಕ್ರಮದಿಂದ ಪರಿಷತ್ತಿನ ಉದ್ದೇಶ ನೆರವೇರಿದೆ. ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸುವ ಇಂತಹ ಕಾರ್ಯಕ್ರಮ ತುಂಬಾ ಸೂಕ್ತವಾದದ್ದು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ತಿಂಗಳ ಸಡಗರ ಕಾರ್ಯಕ್ರಮದಲ್ಲಿ ಅಂಬಲಪಾಡಿ ಜಾನಕಿ ವ್ಯಾಸ ಬಲ್ಲಾಳ ದತ್ತಿ ಹಾಗೂ ಶ್ರೀ ಸದಾನಂದ ಸುವರ್ಣ ದತ್ತಿ ಅವರು ಅ.ಪೊಳಲಿ ಬಾಲಕೃಷ್ಣ ಶೆಟ್ಟಿ ಮತ್ತು ಡಾ.ಶಿವರಾಮ ಕಾರಂತ ಬದುಕು ಮತ್ತು ಬರಹ ಎಂಬ ಎರಡು ದತ್ತಿ ಉಪನ್ಯಾಸಗಳನ್ನು ನೀಡಿದರು.
ಅಮೃತ ಭಾರತಿ ಪ್ರೌಢಶಾಲೆ ಹೆಬ್ರಿಯ ಕನ್ನಡ ಅಧ್ಯಾಪಕ ಮಹೇಶ್ ಹೈಕಾಡಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು.

ಗ್ರಾಮ ಪಂಚಾಯತ್ ಗ್ರಂಥಾಲಯದ ಅರಿವು ಕೇಂದ್ರದ ವತಿಯಿಂದ ನಡೆಸಲಾದ ಓದುವ ಬೆಳಕು ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ತಾವು ಓದಿದ ಮೆಚ್ಚಿನ ಪುಸ್ತಕದ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಹೆಬ್ರಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಅಶೋಕ್, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ದನ್, ಶಿಕ್ಷಣ ಪೌಂಡೇಶನ್ನ ತಾಲೂಕು ಸಂಯೋಜಕಿ ವಿಜಯಲಕ್ಷ್ಮಿ, ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹರಿಕಿರಣ್ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಪ್ರವೀಣ ಕುಮಾರ್ ಎಸ್ ಅವರು ಉಪನ್ಯಾಸದ ಕುರಿತು ಪ್ರತಿಸ್ಪಂದನ ಮಾತುಗಳನ್ನಾಡಿದರು.
ಗ್ರಂಥಪಾಲಕರಾದ ಪುಷ್ಪಾವತಿ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ
ಮಂಜುನಾಥ ಕೆ. ಶಿವಪುರ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಿತೇಶ್ ಶೆಟ್ಟಿ ವಂದಿಸಿದರು.


































