ಚಂದನವನ : ಕಾಂತಾರ ಇಡೀ ಭಾರತೀಯ ಚಿತ್ರರಂಗದಲ್ಲೇ ಪ್ರಸಿದ್ಧಿ ಗಿಟ್ಟಿಸಿಕೊಂಡ ಚಿತ್ರ. ಭಾರೀ ಯಶಸ್ಸಿನೊಂದಿಗೆ ಜನಮನ ಗೆದ್ದ ಚಿತ್ರ. ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಈ ಚಿತ್ರಕ್ಕೆ ಪ್ರೀಕ್ವೆಲ್ ಬರಲಿದೆ ಎಂದು ಈ ಮೊದಲೇ ಘೋಷಣೆ ಆಗಿತ್ತು. ಈಗ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಈ ಬಗ್ಗೆ ಮಾಹಿತಿ ಸಿಕ್ಕಿದೆ.
‘ಕಾಂತಾರ 2’ ಚಿತ್ರದ ಫಸ್ಟ್ ಪೋಸ್ಟರ್ ನವೆಂಬರ್ 27ರ ಮಧ್ಯಾಹ್ನ 12:25ಕ್ಕೆ ಅನಾವರಣಗೊಳ್ಳಲಿದೆ. ಸದ್ಯ ಎಲ್ಲರೂ ಕಾತುರದಿಂದ ಕಾಯುವಂತೆ ಆಗಿದೆ.
ರಿಶಭ್ ಶೆಟ್ಟಿ ಅವರು ನಟನಾಗಿ, ನಿರ್ದೇಶಕನಾಗಿ ಈ ಚಿತ್ರದ ಯಶಸ್ಸು ಬಾಚಿದ್ದರು.
ತುಳುನಾಡಿನ ದೈವಾರಾಧನೆ ಮೇಲೆ ಬೆಳಕು ಚೆಲ್ಲಿದ ಈ ಚಿತ್ರ ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಸಿತ್ತು. ಇದೀಗ ಮತ್ಯಾವ ರೀತಿಯ ದರ್ಶನವಾಗಲಿದೆ ಎಂಬ ಕಾತುರತೆ ಉಂಟುಮಾಡಿದೆ.

ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ 🔥
ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ನವೆಂಬರ್ 27, ಮಧ್ಯಾಹ್ನ 12:25ಕ್ಕೆ’ ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ.
‘ಕಾಂತಾರ 2’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ರಿಷಭ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ನಲ್ಲಿ ರಿಲೀಸ್ ಆಗಲಿದೆ.
ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ. ಇದು ಬರಿ ಬೆಳಕಲ್ಲ, ದರ್ಶನ 🔥
Step into the sacred echoes of the past, where divinity weaves through every frame. Stay enchanted for a glimpse into… pic.twitter.com/jiuwyqQRaP— Hombale Films (@hombalefilms) November 25, 2023
