Connect with us

Hi, what are you looking for?

Diksoochi News

ರಾಷ್ಟ್ರೀಯ

ಮನೆ ಸ್ವಚ್ಛ ಮಾಡುವ ವಿಚಾರದಲ್ಲಿ ಜಗಳ; ಗಂಡನ ಕಿವಿ ಕಚ್ಚಿ ತುಂಡು ಮಾಡಿದ ಹೆಂಡತಿ

1

ನವದೆಹಲಿ : ಮನೆ ಸ್ವಚ್ಛ ಮಾಡುವ ವಿಚಾರದಲ್ಲಿ ಗಂಡ – ಹೆಂಡತಿ ನಡುವೆ ಜಗಳವಾಗಿ, ಹೆಂಡತಿ ಪತಿಯ ಬಲ ಕಿವಿಯನ್ನು ಕಚ್ಚಿ ತುಂಡು ಮಾಡಿರುವ ಘಟನೆ ದೆಹಲಿ ಸುಲ್ತಾನ್‍ಪುರಿ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ಪತಿ ಪೆÇಲೀಸ್ ಪ್ರಕರಣ ದಾಖಲಿಸಿದ್ದಾರೆ.

ಹೆಂಡತಿ ಕಿವಿ ಕಚ್ಚಿ ಎರಡು ತುಂಡಾಗಿದ್ದರಿಂದ 45 ವರ್ಷದ ಪತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸ್ಥಳೀಯ ಪೆÇಲೀಸರು ಮಾಹಿತಿ ನೀಡಿದ್ದಾರೆ. ಪತಿ ನೀಡಿದ ದೂರಿನ ಆಧಾರದ ಮೇಲೆ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement. Scroll to continue reading.

ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯ ಉಂಟುಮಾಡುವುದು) ಅಡಿಯಲ್ಲಿ ಈIಖ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ :

ನವೆಂಬರ್ 20 ರಂದು ಬೆಳಗ್ಗೆ 9:20ರ ಸುಮಾರಿಗೆ ತನ್ನ ಹೆಂಡತಿಗೆ ಮನೆ ಸ್ವಚ್ಛಗೊಳಿಸುವಂತೆ ಹೇಳಿ, ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ. ನಾನು ಮನೆಗೆ ವಾಪಸ್ ಬಂದ ಕೂಡಲೇ ನನ್ನ ಹೆಂಡತಿ ಜಗಳ ತೆಗೆದಿದ್ದಾಳೆ. ಜಗಳದ ಮಧ್ಯೆ ಮಕ್ಕಳೊಂದಿಗೆ ಪ್ರತ್ಯೇಕವಾಗಿರಲು ಮನೆ ಮಾರಾಟ ಮಾಡಿ, ತನಗೂ ಪಾಲು ನೀಡುವಂತೆ ಪತ್ನಿ ಕೇಳಿದ್ದಾಳೆ. ಈ ವೇಳೆ ಪತಿ ಸಮಾಧಾನಪಡಿಸಿದರೂ ಬಗ್ಗದೇ ಮಾತಿನ ಚಕಮಕಿ ಮುಂದುವರಿದಿದೆ.

ಇದರಿಂದ ಆಕೆಯ ಕೋಪ ಮಿತಿಮೀರಿ ಹೊಡೆಯಲು ಬಂದಿದ್ದಳು. ಆಕೆಯನ್ನು ತಳ್ಳಿ, ನಾನು ಮನೆಯಿಂದ ಹೊರಹೋಗುತ್ತಿದೆ. ಆಗ ಹಿಂಬದಿಯಿಂದ ನನ್ನನ್ನ ಹಿಡಿದುಕೊಂಡು ಬಲ ಕಿವಿಯನ್ನು ಕಚ್ಚಿದಳು. ನನ್ನ ಕಿವಿ ಮೇಲಿನ ಭಾಗ ತುಂಡಾಗಿ ರಕ್ತಸ್ರಾವವಾಯಿತು ಎಂದು ದೂರಿನಲ್ಲಿ ಹೇಳಿಕೊಂಡಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

Advertisement. Scroll to continue reading.

ಸದ್ಯ ಸಂತ್ರಸ್ತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದ್ರೆ ಇನ್ನೂ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ನವೆಂಬರ್ 22ರಂದು ಪೆÇಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!