Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಪಾಕಿಸ್ತಾನ ಹೋಗಿ ಫೇಸ್ ಬುಕ್ ಗೆಳೆಯನ್ನು ವರಿಸಿದ್ದ ಅಂಜು ಮರಳಿ ಭಾರತಕ್ಕೆ!

0

ನವದೆಹಲಿ : ಫೇಸ್ ಬುಕ್ ಗೆಳೆಯನಿಗಾಗಿ ಪಾಕಿಸ್ತಾನಕ್ಕೆ ಹೋಗಿ ವಿವಾಹವಾಗಿದ್ದ ಅಂಜು ಇದೀಗ ಭಾರತಕ್ಕೆ ಮರಳಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿರುವ 34 ವರ್ಷದ ಅಂಜು ವಾಘಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ಏಜೆನ್ಸಿಗಳಿಂದ ಹಲವಾರು ಸುತ್ತಿನ ವಿಚಾರಣೆಯ ನಂತರ, ಆಕೆಗೆ ಕುಟುಂಬವನ್ನು ಭೇಟಿಯಾಗಲು ತಾಯ್ನಾಡಿಗೆ ಪ್ರಯಾಣಿಸಲು ಅವಕಾಶ ನೀಡಲಾಯಿತು. ಆಕೆಯನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ದೆಹಲಿಗೆ ತಲುಪಿದ್ದಾರೆ ಎಂದು ವರದಿಯಾಗಿದೆ.

ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂಜು ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದಾರೆ. ನಾನು ನನ್ನ ಸ್ವಂತ ಇಚ್ಛೆಯಿಂದ ಭಾರತಕ್ಕೆ ಮರಳಿದ್ದೇನೆ, ನನ್ನ ಮಕ್ಕಳು ಕುಟುಂಬದವರನ್ನು ಭೇಟಿಯಾಗಬೇಕಿದೆ ಎಂದು ಹೇಳಿದ್ದಾರೆ.

Advertisement. Scroll to continue reading.

ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅಂಜು ಹಿಂದಿರುಗಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಭಿವಾಡಿಯ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ದಿಲೀಪ್ ಸೈನಿ ಹೇಳಿದ್ದಾರೆ.

ಅರವಿಂದ್ ಈಗ ಭಿವಾಡಿಯಲ್ಲಿಲ್ಲ ತಮ್ಮ ಮಕ್ಕಳೊಂದಿಗೆ ಬೇರೊಂದು ಸ್ಥಳದಲ್ಲಿದ್ದಾರೆ ಎಂದು ಪೆÇಲೀಸ್
ಮೂಲಗಳು ತಿಳಿಸಿವೆ. ಜುಲೈನಿಂದ, ಅಂಜು ಅಥವಾ ಫಾತಿಮಾ ತನ್ನ 29 ವರ್ಷದ ಪತಿ ನಸ್ರುಲ್ಲಾ ಅವರೊಂದಿಗೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನಿಸಿದ ಅಂಜು ರಾಜಸ್ಥಾನದ ಭಿವಾಡಿಯಲ್ಲಿರುವ ಅರವಿಂದ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಗಂಡನನ್ನು ತೊರೆದು ಪಾಕಿಸ್ತಾನಕ್ಕೆ ತೆರಳಿದ್ದ ಅಂಜು ಪೇಶಾವರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸ್ಥಳೀಯ ನ್ಯಾಯಾಲಯದಲ್ಲಿ ತನ್ನ ಗಂಡನಸ್ರುಲ್ಲಾ ಕುಟುಂಬ ಸದಸ್ಯರು, ಪೆÇಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ಮದುವೆಯಾದರು. ಅಂಜು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.


Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!