ನವದೆಹಲಿ : ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರು ಭಾರತದ ಪ್ರಧಾನಿ ಮೋದಿ ಅವರೊಂದಿಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ‘ಉತ್ತಮ ಸ್ನೇಹಿತರು @ COP28’ #Melodi ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಈ ವೈರಲ್ ಪೋಸ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್ ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಸ್ನೇಹಿತರನ್ನು ಭೇಟಿಯಾಗುವುದು ಯಾವಾಗಲೂ ಸಂತೋಷದ ಸಂಗತಿ’ ಎಂದು ಬರೆದುಕೊಂಡಿದ್ದಾರೆ.
ಭಾರತ ಆಯೋಜಿಸಿದ್ದ ಜಿ20 ಶೃಂಗಸಭೆಯ ಸಮಯದಲ್ಲಿ ಸೆಪ್ಟೆಂಬರ್ ನಿಂದ ‘ಮೆಲೋಡಿ’ ಹ್ಯಾಶ್ ಟ್ಯಾಗ್ ಜನಪ್ರಿಯತೆಯನ್ನ ಗಳಿಸಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸಿಒಪಿ 28 ಸಭೆಯಲ್ಲಿ ಮೆಲೋನಿ ಅವರು ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
Advertisement. Scroll to continue reading.

Meeting friends is always a delight. https://t.co/4PWqZZaDKC— Narendra Modi (@narendramodi) December 2, 2023
In this article:Dubai, Italy Prime Minister Giorgia Meloni, melodi, PM Modi, selfie, viral news, viral post

Click to comment