ಕೋಟ : ಆನ್ಲೈನ್ ಬೆಟ್ಟಿಂಗ್ ಗೇಮ್ನಲ್ಲಿ ಹಣ ಡಬ್ಬಲ್ ಆಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ವಂಚಿಸಿರುವ ಘಟನೆ ಕೋಟದಲ್ಲಿ ನಡೆದಿದೆ.
ಆದಿತ್ಯ ಎಂಬವರಿಗೆ ಪ್ರವೀಣ ಹಾಗೂ ಅಜೀತ್ ಕುಮಾರ್ ಎಂಬುವವರು ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಬಗ್ಗೆ ತಿಳಿಸಿದ್ದಾರೆ. ಆನ್ಲೈನ್ ನಲ್ಲಿ ಹಣವನ್ನು ಪಣವಾಗಿಟ್ಟು, ಆನ್ಲೈನ್ ಗೇಮ್ ಆಡಿದರೆ ನಿನ್ನ ಹಣ ಡಬ್ಬಲ್ ಆಗುತ್ತದೆ” ಎಂಬುದಾಗಿ ನಂಬಿಸಿದ್ದಾರೆ.
ಅದರಂತೆ ಆದಿತ್ಯ ಮೊದಲಿಗೆ 2021 ನೇ ಜುಲೈ ತಿಂಗಳಿನಲ್ಲಿ ಬ್ಯಾಂಕಿನ ತಮ್ಮ ಖಾತೆಯಿಂದ Phonepay ಮುಖಾಂತರ ಪ್ರವೀಣ ರವರಿಗೆ ರೂ. 25,000/- ಹಣವನ್ನು ವರ್ಗಾವಣೆ ಮಾಡಿದ್ದಾರೆ. ಅದೇ ರೀತಿ ಆರೋಪಿಗಳಿಬ್ಬರೂ ಈ ವರೆಗೆ ಒಟ್ಟು ರೂ. 7,00,000/- ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.
