Connect with us

Hi, what are you looking for?

Diksoochi News

ಸಿನಿಮಾ

24 ರ ಹರೆಯದ ಮಲಯಾಳಂ ನಟಿ ಹೃದಯಾಘಾತದಿಂದ ನಿಧನ

1

ಮಲೆಯಾಳಂ ಚಿತ್ರರಂಗದ ಯುವ ನಟಿ ಕೇವಲ 24ರ ಹರೆಯದ ಲಕ್ಷ್ಮಿಕಾ ಸಂಜೀವನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
 

ಅವರು ಹಲವು ಸಿರೀಯಲ್‌ಗಳು ಹಾಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಕೇರಳದಲ್ಲಿ ಮನೆ ಮಾತಾಗಿದ್ದರು. ಶಾರ್ಜಾದಲ್ಲಿ ಅವರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ಮಲೆಯಾಳಂನ ಹಲವು ಸಿರೀಯಲ್‌ಗಳಲ್ಲಿ ನಟಿಸಿದ್ದ ಲಕ್ಷ್ಮಿಕಾ ಸಂಜೀವನ್ ಅವರು ಕಾಕ ಸಿರೀಯಲ್‌ನ ಪಂಚಮಿ ಪಾತ್ರದಿಂದ ಸಾಕಷ್ಟು ಜನಪ್ರಿಯರಾಗಿದ್ದರು. 

ಸೀರಿಯಲ್ ಮಾತ್ರವಲ್ಲದೇ ಸಿನಿಮಾಗಳಲ್ಲಿ ನಟಿಸಿದ್ದ ಲಕ್ಷ್ಮಿಕಾ ಅವರು ಒರು ಯಮಂಡನ್ ಪ್ರೇಮಕಥಾ, ಪಂಚವರ್ಣತತ, ಸೌದಿ ವೆಲ್ಲಕ್ಕ, ಪುಳಯಮ್ಮ, ಉಯಿರೆ, ಒರು ಕುಟ್ಟಂಡನ್ ಬ್ಲಾಗ್, ನಿತ್ಯಹರಿತ ನಾಯಗನ್ ಮೊದಲಾದ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 

ಕೊಚ್ಚಿ ಜಿಲ್ಲೆಯ ವಜವೆಲ್ಲಿಲ್ ನಿವಾಸಿ ಸಂಜೀವನ್ ಹಾಗೂ ಮಿಲಿತಾ ದಂಪತಿಯ ಪುತ್ರಿಯಾದ ಲಕ್ಷ್ಮಿಕಾ ಅವರು ಅರಬ್‌ ರಾಷ್ಟ್ರ ಶಾರ್ಜಾದಲ್ಲಿ ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. 

ಇನ್ನು, ಲಕ್ಷಿಕಾ ನಿಧನಕ್ಕೆ ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!