ಮಂಗಳೂರು : ಮುಸ್ಲಿಂ ಯುವತಿಯೊಬ್ಬಳು ಹಿಂದು ಸಂಘಟನೆಯ ಕಾರ್ಯಕರ್ತನನ್ನು ವರಿಸಿದ್ದಾಳೆ. ಮಂಗಳೂರಿನ ಸುರತ್ಕಲ್ ನಲ್ಲಿ ಹಿಂದೂ-ಮುಸ್ಲಿಂ ಲವ್ ಸ್ಟೋರಿ ನಡೆದಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿರುವ ಬಗ್ಗೆ ವರದಿಯಾಗಿದೆ.
ನವೆಂಬರ್ 30 ರಂದು ಸುರತ್ಕಲ್ನ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈಗ ವಿವಾಹವಾಗಿದ್ದಾರೆ. ಪ್ರಶಾಂತ್, ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ.
ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಪ್ರಶಾಂತ್ ಭಂಡಾರಿ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.
Advertisement. Scroll to continue reading.

ಈ ನಡುವೆ ಯುವತಿಯ ಪೋಷಕರು ಸದ್ಯ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
In this article:bhajarangadal, Diksoochi news, karavali news, mangalore, surathkal, VHP

Click to comment