Connect with us

Hi, what are you looking for?

Diksoochi News

ಕರಾವಳಿ

‘ಮಾಸ್ಟರ್ ಶೆಫ್ ಇಂಡಿಯಾ 2023’ ಪ್ರಶಸ್ತಿ ಗೆದ್ದ ಮಂಗಳೂರಿನ ಮೊಹಮ್ಮದ್ ಆಶಿಕ್

1

ಮಂಗಳೂರು: ‘ಮಾಸ್ಟರ್ ಶೆಫ್ ಇಂಡಿಯಾ 2023’ರ ಸ್ಪರ್ಧೆಯಲ್ಲಿ ಮಂಗಳೂರಿನ ಮೊಹಮ್ಮದ್ ಆಶಿಕ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಶುಕ್ರವಾರ ನಡೆದ ಸ್ಪರ್ಧೆಯ ಕೊನೆಯ ಸಂಚಿಕೆಯಲ್ಲಿ ಫೈನಲ್ ತಲುಪಿದ್ದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಅವರನ್ನು ಹಿಂದಿಕ್ಕಿ ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿಯನ್ನು ಮೊಹಮ್ಮದ್ ಆಶಿಕ್ ಗೆದ್ದಿದ್ದಾರೆ.

ಸ್ಪರ್ಧೆಯ ಮೊದಲ ರನ್ನರ್ ಅಪ್ ಸ್ಥಾನವನ್ನು ನಂಬಿ ಜೆಸ್ಸಿಕಾ ಮರಕ್ ಅವರು ಹಾಗೂ ಎರಡನೇ ರನ್ನರ್ ಅಪ್ ಸ್ಥಾನವನ್ನು ರುಖ್ಸಾರ್ ಸಯೀದ್ ಅವರು ಪಡೆದುಕೊಂಡಿದ್ದಾರೆ.

Advertisement. Scroll to continue reading.

24 ವರ್ಷದ ಮೊಹಮ್ಮದ್ ಆಶಿಕ್ ಅವರಿಗೆ ಕಳೆದ ಸೀಸನ್ ಪಾಲ್ಗೊಂಡರೂ ಸಹ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ದೇಶಾದ್ಯಂತ ಭಾಗವಹಿಸಿದ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಗಳಿಸಿದ್ದರು. 

    Click to comment

    Leave a Reply

    Your email address will not be published. Required fields are marked *

    Advertisement

    Trending

    You May Also Like

    error: Content is protected !!