ಬ್ರಹ್ಮಾವರ : ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಯ ಖಾತೆಯಿಂದ ಲಕ್ಷಾಂತರ ರೂ. ಎಗರಿಸಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಸುಶೀಲಾ ಎಂ (75) ಎಂಬವರ ಮೊಬೈಲ್ಗೆ ನ.15 ರಂದು ಅಪರಿಚಿತ ನಂಬರ್ನಿಂದ ಕರೆ ಬಂದಿದ್ದು, ತಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಳ್ಳಲಾಗಿದೆ.
ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಪಟ್ಟು ನಿಮ್ಮ ಕೆವೈಸಿ ಅಪ್ಡೇಟ್ ಮಾಡಲು ಬಾಕಿ ಇದೆ ಎಂದು ನಂಬಿಸಲಾಗಿದೆ. ಬಳಿಕ ಸುಶೀಲಾ ಅವರಿಂದ ಓಟಿಪಿ ಪಡೆದು, ಅದನ್ನು ಬಳಸಿ, 2,82,000 ರೂ. ಅನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.