ಬೆಂಗಳೂರು : ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಮಂಗಳವಾರ ಮತ್ತೆ ಭದ್ರತಾ ಉಲ್ಲಂಘನೆ ಪ್ರಕರಣದ ಕುರಿತು ಗದ್ದಲ ಮುಂದುವರೆದಿದೆ, ಇದರೊಂದಿಗೆ ಇಂದೂ ಕೂಡ ಹಲವು ಸಂಸದರನ್ನು ಅಮಾನತು ಮಾಡಲಾಗಿದೆ.
ಲೋಕಸಭೆಯಿಂದ ಫಾರೂಕ್ ಅಬ್ದುಲ್ಲಾ, ಶಶಿ ತರೂರ್, ಮನೀಶ್ ತಿವಾರಿ, ಸುಪ್ರಿಯಾ ಸುಳೆ, ಮೊಹಮ್ಮದ್ ಫೈಸಲ್, ಕಾರ್ತಿ ಚಿದಂಬರA, ಸುದೀಪ್ ಬಂಧೋಪಾಧ್ಯಾಯ, ಡಿಂಪಲ್ ಯಾದವ್ ಮತ್ತು ಡ್ಯಾನಿಶ್ ಅಲಿ ಸೇರಿದಂತೆ ಕನಿಷ್ಠ ೪೯ ಲೋಕಸಭಾ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ನಿನ್ನೆ ಒಂದೇ ದಿನದಲ್ಲಿ ದಾಖಲೆಯ ೭೯ ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿAದ ಅಮಾನತುಗೊಳಿಸಲಾಗಿತ್ತು. ಇಂದು ಸೇರಿ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಈ ಅಧಿವೇಶನವನ್ನು ಅಮಾನತುಗೊಳಿಸಿರುವ ಒಟ್ಟು ಸಂಸದರ ಸಂಖ್ಯೆ ೧೭೩ ಕ್ಕೆ ಏರಿದೆ. ಇದು ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ಅತ್ಯಧಿಕವಾಗಿದೆ.
Advertisement. Scroll to continue reading.

In this article:bengaluru, Diksoochi news, lokhasabhe, parliament, parliament attack

Click to comment