ಮಧ್ಯಪ್ರದೇಶ: ಇತ್ತೀಚೆಗೆ ದೇಶಾದ್ಯಂತ ಹೃದಯಾಘಾತ ಪ್ರಕರಣಗಳೇ ಹೆಚ್ಚಾಗುತ್ತಿದೆ.ಈ ನಡುವೆ ಇತ್ತೀಚೆಗೆ ಪೇಂಟಿಂಗ್ ಮಾಡುತ್ತಿದ್ದ ಯುವಕನೊಬ್ಬ ದಿಢೀರನೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೃತ ಯುವಕನನ್ನು ಪೇಂಟರ್ ಆಶಿಶ್ ಎಂದು ಗುರುತಿಸಲಾಗಿದೆ.
ಇಂದೋರ್ ನಲ್ಲಿ ಆಶಿಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಸುಸ್ತು ಕಾಣಿಸಿಕೊಂಡಿದೆ. ಆತ ಮುಖ ತೊಳೆದುಕೊಂಡು ಬಂದು, ಪೇಂಟ್ ಬಕೆಟ್ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿದೆ.

ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ತಕ್ಷಣವೇ ಓಡಿಬರುತ್ತಾರೆ. ನೆರವಿಗಾಗಿ ಬೊಬ್ಬೆ ಹೊಡೆಯುತ್ತಾರೆ. ಒಬ್ಬಾತ ಆಶಿಶ್ನ ಕೈಯನ್ನು ತಿಕ್ಕಿ ಉಸಿರಾಡುವಂತೆ ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಆಶಿಶ್ ಸ್ಥಳದಲ್ಲೇ ಇಹಲೋಕ ತ್ಯಜಿಸಿರುತ್ತಾನೆ.
Indore | Heart Attack |
काम के दौरान इंदौर के पेंटर आशीष को घबराहट हुई। वह उठा तुरंत पानी पीया और मुंह धो कर लौटा।
उसके बाद एका एक सीने में दर्द उठा। वह पेंट के डब्बे पर बैठ गया पर 1 मिनट के अंदर वह गिर पड़ा।
उसके दिल की धड़कन रुक चुकी थी।
आज घर से निकलते वक्त आज कोई भी… pic.twitter.com/fqcERlA7pP— काश/if Kakvi (@KashifKakvi) December 28, 2023


































