Connect with us

Hi, what are you looking for?

Diksoochi News

ಅಂತಾರಾಷ್ಟ್ರೀಯ

ಜಪಾನ್‌ನಲ್ಲಿ ಪ್ರಬಲ ಭೂಕಂಪದ ಬೆನ್ನಲ್ಲೇ ಅಪ್ಪಳಿಸಿದ ಸುನಾಮಿ ಮೊದಲ ಅಲೆ

1

ಟೋಕಿಯೋ : ಇಂದು ಬೆಳಗ್ಗೆ ಈಶಾನ್ಯ ಜಪಾನ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಇದರ ಬೆನ್ನಲ್ಲೇ ಜಪಾನ್ ಕರಾವಳಿಗೆ ಸುನಾಮಿಯ ಮೊದಲ ಅಲೆಗಳು ಅಪ್ಪಳಿಸಿವೆ ಎಂದು ವರದಿಯಾಗಿದೆ.

ಸೋಮವಾರ ಮಧ್ಯ ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ವೇಳೆ ಅಮೆರಿಕ ಭೂ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು.

ಇದರ ಬೆನ್ನಲ್ಲೇ ಇದೀಗ ಜಪಾನ್ ಕರಾವಳಿ ತೀರಕ್ಕೆ 1 ರಿಂದ 2 ಅಡಿ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ವರದಿಯಾಗಿದೆ.

Advertisement. Scroll to continue reading.

ಜಪಾನ್ ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ ನಿಂದ 2 ಮೀಟರ್‌ಗಳಷ್ಟು ಎತ್ತರದ ಸುನಾಮಿ ಅಲೆಗಳು ಬಂದಿರುವುದು ದೃಢಪಟ್ಟಿದೆ.

ಜಪಾನ್ ನ ಕರಾವಳಿ ಪ್ರದೇಶ ನೋಟೋದಲ್ಲೂ ಮೊದಲ ಸುನಾಮಿ ಅಲೆಗಳು ಅಪ್ಪಳಿಸಿರುವ ಕುರಿತು ವರದಿಯಾಗಿದೆ. ಈ ಅಲೆಗಳ ಎತ್ತರ 5 ಮೀಟರ್ ವರೆಗೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಜಪಾನ್ ಇಶಿಕಾವಾ ಪ್ರಿಫೆಕ್ಚರ್‌ನಲ್ಲಿರುವ ನೋಟೊ ಪ್ರದೇಶದಲ್ಲಿ ಸುಮಾರು 4:10 pm (0710 GMT) ಸುಮಾರಿನಲ್ಲಿ ಭೂಕಂಪನದ ಬಳಿಕ ಸುನಾಮಿ ಭೀತಿ ಆವರಿಸಿದೆ.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಸುತ್ತಮುತ್ತಲಿನ ಜನರಿಗೆ ಎತ್ತರದ ನೆಲಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಎಲ್ಲಾ ನಿವಾಸಿಗಳು ತಕ್ಷಣವೇ ಎತ್ತರದ ನೆಲಕ್ಕೆ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಭೂಕಂಪದ ನಂತರ ಎಚ್ಚರಿಕೆ ನೀಡಿದೆ. 

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!