Connect with us

Hi, what are you looking for?

Diksoochi News

ಕರಾವಳಿ

ಕೊಲ್ಲೂರು : ಮುದ್ರ ಸಾಲ ಯೋಜನೆ ಹೆಸರಲ್ಲಿ ವಂಚನೆ

0


ಕೊಲ್ಲೂರು : ಮುದ್ರಸಾಲ ಯೋಜನೆಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಘಟನೆ ಕೊಲ್ಲೂರಿನಲ್ಲಿ ನಡೆದಿದೆ.

ಕಿರಣ ಕುಮಾರ್ ಎಂಬಾತ ಸೋಶಿಯಲ್ ಮೀಡಿಯ ಮೂಲಕ ಮುದ್ರ ಸಾಲ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ಜಾಹಿರಾತಿನ ಮುಖಾಂತರ ಪ್ರಕಟಣೆಯನ್ನು ಹಾಕಿದ್ದು, ಸಂತೋಷ ಎಂಬವರು ಈ ಜಾಹೀರಾತು ನಂಬಿ ಡಿ.೮ ರಂದು ಕಿರಣನನ್ನು ಸಂಪರ್ಕಿಸಿದ್ದಾರೆ.


ಮುದ್ರ ಸಾಲ ಕೊಡಿಸುವುದಾಗಿ ಆತ ಹೇಳಿದ್ದಾನೆ. ಆತ ತಿಳಿಸಿದಂತೆ ಸಂತೋಷ ತನ್ನ ದಾಖಲಾತಿಗಳನ್ನು ಕಿರಣನ ವಾಟ್ಸ್ ಆಪ್‌ಗೆ ಕಳುಹಿಸಿದ್ದಾರೆ. ಅಲ್ಲದೇ ೩ ಕಂತುಗಳಲ್ಲಿ ೩೭,೯೫೫/- ರೂಪಾಯಿ ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು.

Advertisement. Scroll to continue reading.

ಆ ಬಳಿಕ ಆತನನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಖಲಾತಿಯನ್ನು ಪಡೆದು ಮುದ್ರ ಯೋಜನೆಯ ಸಾಲವನ್ನು ನೀಡದೆ ವಂಚಿಸಿದ್ದಾನೆ ಎಂದು ದೂರಲಾಗಿದೆ.

ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!