ಮಂಗಳೂರು : ಹುಬ್ಬಳ್ಳಿಯಲ್ಲಿ ರಾಮ ಭಕ್ತರನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ವಿರುದ್ಧ ಮತ್ತು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ಗುರುವಾರ ಸಂಜೆ ಪಣಂಬೂರು ಎಸಿಪಿ ಕಚೇರಿ ಮುಂದೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮನವಿ ಸಲ್ಲಿಸಲಾಯಿತು.
ದೇಶದಲ್ಲಿ ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ, ಸಂತಸ ಮನೆ ಮಾಡಿದೆ. ಆದರೆ, ಕರ್ನಾಟಕದ ಸಿದ್ದರಾಮಯ್ಯ ಸರಕಾರ ಈ ಉತ್ಸವ ಕಾಲದಲ್ಲಿ ಹಿಂದೂ ಸಮಾಜದ ಮೇಲೆ ಗಧಾ ಪಹಾರ ಮಾಡಲು ಒಂದಾಗಿರುವುದು ಅತ್ಯಂತ ಖೇದಕರ ವಿಚಾರ. ಹಿಂದೂ ಸಮಾಜದ 500 ವರ್ಷಗಳ ದೀರ್ಘಕಾಲದ ಹೋರಾಟದ ಫಲವಾಗಿ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳುತ್ತಿದ್ದು ಇದನ್ನು ಸಿದ್ದರಾಮಯ್ಯ ಮತ್ತು ಅವರ ಕಾಂಗ್ರೆಸ್ ಪಕ್ಷದ ಅನುಯಾಯಿಗಳಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರನ್ನು ಗುರುತಿಸಿ ಅವರ ಮೇಲಿದ್ದ ಹಳೆಯ ಪ್ರಕರಣವನ್ನು ಕೆದಕಿ ಬಂಧಿಸಲಾಗಿದೆ.
ಇದು ಸಿದ್ದರಾಮಯ್ಯ ಸರಕಾರದ ಹತಾಶೆಯನ್ನು ಜಗ ಜಾಹಿರು ಮಾಡಿದ್ದು, ಈ ಹೀನ ಕೃತ್ಯವನ್ನು ನಡೆಸಿರುವ ಸಿದ್ದರಾಮಯ್ಯ ಸರಕಾರದ ಬಗ್ಗೆ ನಮಗೆ ಮರುಕವಿದೆ.

ಕಾಂಗ್ರೆಸ್ಸಿನ ಇನ್ನೊಬ್ಬ ನಾಯಕನಾಗಿರುವ ಬಿಕೆ ಹರಿಪ್ರಸಾದ್ ಅವರು ರಾಮ ಜನ್ಮಭೂಮಿಗೆ ಹೋದರೆ
ಮತ್ತೊಂದು ಗೋದ್ರ ನರಮೇಧ ನಡೆಯಬಹುದು ಎನ್ನುವ ಮೂಲಕ ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಹಿಂದೂ ಸಮಾಜವನ್ನು ಈ ಸರಕಾರದ ಹಿಂದೂ ವಿರೋಧಿ ನೀತಿಗಳು ಪ್ರತಿದಿನವೂ ಒಂದಲ್ಲ ಒಂದು ರೀತಿಯಿಂದ ಬಹಿರಂಗಗೊಳ್ಳುತ್ತಿದ್ದು ಈ ಸರಕಾರದ ವಿರುದ್ಧ ಜಾಗರಣ ವೇದಿಕೆ ಹೋರಾಟ ಕೈಗೊಳ್ಳಲಿದೆ.
ರಾಜ್ಯದಲ್ಲಿ ಹಿಂದುಗಳು ರಾಮಭಕ್ತರಾಗುವುದೇ ಅಪರಾಧ ಎಂದಾದರೆ ನಾವೆಲ್ಲರೂ ಆ ಅಪರಾಧವನ್ನು ಮಾಡಲು ಉತ್ಸುಕರಾಗಿದ್ದೇವೆ.

ಹುಬ್ಬಳ್ಳಿಯ ರಾಮಭಕ್ತರನ್ನು ಬಂಧಿಸಿದ ರೀತಿಯಲ್ಲಿ ನಮ್ಮನ್ನು ಕೂಡ ಬಂಧಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭ ಜಿಲ್ಲಾ ಪ್ರಮುಖರಾದ ಹರ್ಷಿತ್ ಶಕ್ತಿನಗರ, ಲಿಖಿತ್ ರಾಜ್ ಮೂಡುಶೆಡ್ಡೆ, ಬಾಲಕೃಷ್ಣ ಮುಂಚೂರು, ಕಾರ್ತಿಕ್ ಬರ್ಕೆ, ಅನಿಲ್ ಕೊಡಿಕಲ್, ನವೀನ್ ಮಂಗಳಾದೇವಿ, ಪವನ್ ಮಂಗಳಾದೇವಿ, ಪ್ರಜ್ವಲ್ ಶಕ್ತಿನಗರ, ಮಿಥುನ್ ಬರ್ಕೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

































