ಮಂಗಳೂರು : ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಪ್ರಯಾಣಿಕ ಮಹಿಳೆ ಹೊರಕ್ಕೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಜೋಕಟ್ಟೆ ಕ್ರಾಸ್ ಬಳಿ ನಡೆದಿದೆ.
ಈರಮ್ಮ(65) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈರಮ್ಮ ತನ್ನ ಮಗಳೊಂದಿಗೆ ಖಾಸಗಿ ಬಸ್ಸಿನಲ್ಲಿ ಸುರತ್ಕಲ್ ಕಡೆಗೆ ಪ್ರಯಾಣಿಸುತ್ತಿದ್ದರು.
ಬೆಳಿಗ್ಗೆ 10:10 ರ ಸುಮಾರಿಗೆ ಬಸ್ಸು ಜೋಕಟ್ಟೆ ಕ್ರಾಸ್ ಬಳಿಯ ಸರ್ವೀಸ್ ಸ್ಟೇಷನ್ ತಲುಪಿದಾಗ, ಅದರ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ.
Advertisement. Scroll to continue reading.

ಪರಿಣಾಮ ಚಾಲಕನ ಪಕ್ಕದ ಮುಂದಿನ ಸೀಟಿನಲ್ಲಿ ಕುಳಿತಿದ್ದ ಈರಮ್ಮ ಬಸ್ಸಿನಿಂದ ಹೊರಕ್ಕೆ ಬಿದ್ದಿದ್ದಾರೆ. ಅಲ್ಲದೆ, ಬಸ್ ನ ಹಿಂಭಾಗದ ಎಡ ಚಕ್ರವು ಈರಮ್ಮ ಅವರ ಮೇಲೆ ಚಲಿಸಿದ ಪರಿಣಾಮವಾಗಿ ತಲೆಗೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:accident, bus driver, death, Diksoochi news, Featured, jokatte cross, mangaluru, surathkal

Click to comment