ಉಡುಪಿ : ಬಾಂಧವ್ಯ ಫೌಂಡೇಶನ್ ನಿಂದ ನಿರ್ಮಿಸಲ್ಪಟ್ಟ ಮನೆಯನ್ನು ತೆಕ್ಕಟ್ಟೆ ಮಣೂರು ನಿವಾಸಿ ಸವಿತಾ ಮರಕಾಲರವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ರಾಜ್ಯ ಉತ್ತಮ ಪ್ರಶಸ್ತಿ ವಿಜೇತ ನರೇಂದ್ರ ಕುಮಾರ್ ಮತ್ತು ಹೃದಯ ಸಂಬಧಿತ ವಿಷಯದಲ್ಲಿ ಪಿ ಎಚ್ ಡಿ ಜ್ಯೋತಿ ಸಾಮಂತ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅರ್ಜುನ್ ಭಂಡಾರ್ಕರ್, ಆಸರೆ ಅನಿಮಲ್ ಟ್ರಸ್ಟ್‌ನ ಸಾಕ್ಷಿ ಸುನೀಲ್ ಕಾಮತ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್ ಪಿ, ಉಡುಪಿ ಟೌನ್ ಪೊಲೀಸ್ ಠಾಣೆ ಎ.ಎಸ್.ಐ ಜಯಕರ್ ಐರೋಡಿ ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.

ಕಾರ್ಯಕ್ರಮದಲ್ಲಿ ಬಾಂಧವ್ಯ ಫೌಂಡೇಶನ್ ನ ಸ್ಥಾಪಾಕಾಧ್ಯಕ್ಷ ದಿನೇಶ್ ಬಾಂಧವ್ಯ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮವನ್ನು ಟಿವಿ ನಿರೂಪಕ ಪ್ರಣುತ್ ಗಾಣಿಗ ನಿರೂಪಿಸಿ, ವಂದಿಸಿದರು.
Advertisement. Scroll to continue reading.
