ನವದೆಹಲಿ: ಬೇರೆ ಬೇರೆ ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಬಳಕೆ ಪ್ರಕರಣಗಳನ್ನು ಮನಗಂಡಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಹೊಂದಿರುವ ವಾಹನ ಮಾಲೀಕರು, ಫಾಸ್ಟ್ಯಾಗ್ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ಜನವರಿ 31ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ, ಇ-ಕೆವೈಸಿ ಭರ್ತಿಯ ಜತೆಗೆ ಜನವರಿ 31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು. ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ. ಒಂದು ವೇಳೆ ಇ – ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ಯಾಗ್‌ನಲ್ಲಿ ಹಣ ಇದ್ದ ಹೊರತಾಗಿಯೂ ಅದು ಬಳಕೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಯುನ್ನು ನೀವು ಫಾಸ್ಟ್ಯಾಗ್ ಪಡೆದುಕೊಂಡ ಬ್ಯಾಂಕ್‌ಗಳಿಗೆ ಹೋಗಿ ತಿಳಿಯಬಹುದು ಅಥವಾ ಟೋಲ್ ಪ್ಲಾಜಾಗೆ ಹೋಗಿ ಪಡೆಯಬಹುದು ಅಥವಾ ಫಾಸ್ಟ್ಯಾಗ್ ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಸಲಹೆ ನೀಡಲಾಗಿದೆ.
