ನಂಜನಗೂಡು: ಕಪಿಲ ನದಿಯಲ್ಲಿ ಬೆಳಿಗ್ಗೆ ಸ್ನಾನಕ್ಕೆಂದು ಇಳಿದಿದ್ದ ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ತುಮಕೂರು ಮೂಲದ ಗವಿ ರಂಗ(19), ರಾಕೇಶ್(19) ಹಾಗೂ ಅಪ್ಪು(16) ಎಂದು ಗುರುತಿಸಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜೆಗೆ ಸೇತುವೆ ಬಳಿ ಮೂವರು ಕಪಿಲಾ ನದಿ ಪಾಲಾಗಿದ್ದಾರೆ. ಮೂವರು ಅಯ್ಯಪ್ಪ ಮಾಲಾಧಾರಿಗಳಾಗಿದ್ದು, ಸ್ನಾನಕ್ಕೆಂದು ನದಿಗೆ ಇಳಿದಿದ್ದ ವೇಳೆ ಈ ದುರಂತ ಸಂಭವಿಸಿದೆ.
Advertisement. Scroll to continue reading.

ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಐವರು ಗುರುವಾರ ತಡರಾತ್ರಿ ಇಲ್ಲಿನ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಇಬ್ಬರು ಈಜಿ ಮೇಲೆ ಬಂದಿದ್ದಾರೆ ಎನ್ನಲಾಗಿದೆ.


































