ಮಂಗಳೂರು: ದೈವ ನರ್ತನದ ವೇಳೆ ಹೃದಯಾಘಾತದಿಂದ ದೈವ ನರ್ತಕರೊಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪ ನಡೆದಿದೆ.
ಪದವಿನಂಗಡಿ ಗಂಧಕಾಡು ನಿವಾಸಿ 47 ವರ್ಷದ ಅಶೋಕ್ ಬಂಗೇರ ಮೃತ ದೈವ ನರ್ತಕ.
ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವ ನೇಮ ಹಮ್ಮಿಕೊಳ್ಳಲಾಗಿತ್ತು. ದೈವ ನರ್ತನದ ವೇಳೆಯೇ ಅಶೋಕ್ ಬಂಗೇರ ಅವರಿಗೆ ಲಘುವಾಗಿ ಎದೆನೋವು ಕಾಣಿಸಿಕೊಂಡಿತ್ತು.
Advertisement. Scroll to continue reading.
ಹೀಗಾಗಿ ದೈವ ನೇಮ ಅರ್ಧಕ್ಕೆ ನಿಲ್ಲಿಸಿದ ಅಶೋಕ ಬಂಗೇರಾ ಅವರು ಆಸ್ಪತ್ರೆಗೆ ತೆರಳಿದ್ದರು.
ಆದರೆ, ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
Advertisement. Scroll to continue reading.