ಬಿಗ್ ಬಾಸ್ ಫಿನಾಲೆ ಮುಗಿದಿದೆ. ಕಿಚ್ಚ ಸುದೀಪ್ ಎಂದಿನಂತೆ ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಇನ್ನು ಕಿಚ್ಚ ತಮ್ಮ ಚಿತ್ರದ ಶೂಟಿಂಗ್ನತ್ತ ಹೊರಳಿದ್ದಾರೆ. ಈ ನಡುವೆ ಮತ್ತೆ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ಕಾರ್ಯ ಮಾಡಿದ್ದಾರೆ.
ಮತ್ತೆ AskKiccha ಸೆಷನ್ ಮುಂದುವರೆದಿದೆ. ಈ ಬಾರಿಯೂ ಕಿಚ್ಚ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಹಿಂದೇಟು ಹಾಕದೆ ಉತ್ತರಿಸಿದ್ದಾರೆ.

ದರ್ಶನ್ ಬಗ್ಗೆ ಏನಂದ್ರು?
ನಟ ದರ್ಶನ್ – ಸುದೀಪ್ ಒಂದು ಕಾಲದಲ್ಲಿ ಕುಚುಕು ಗೆಳೆಯರು. ಆದ್ರೆ, ಈಗ ಅವರಿಬ್ಬರು ಎರಡು ತೀರದಲ್ಲಿ ನಿಂತಂತಿದ್ದಾರೆ. ಈಗ ಕಿಚ್ಚ ಆಸ್ಕ್ ಟಾಸ್ಕ್ ಕೊಟ್ರೆ ಅಭಿಮಾನಿಗಳು ಬಿಡ್ತಾರೇಯೇ…ಇವರಿಬ್ಬರ ಮುನಿಸಿಗೆ ಕಾರಣವೇ ಗೊತ್ತಿಲ್ಲ…ಆದ್ರೆ, ಇವರಿಬ್ಬರು ಜೊತೆಯಾಗಲಿ, ಒಟ್ಟಿಗೆ ಸಿನಿಮಾ ಮಾಡಲಿ ಅನ್ನೋ ಹೆಬ್ಬಯಕೆ ಇದೆ ಅಭಿಮಾನಿಗಳಲ್ಲಿ.
ಹಾಗಾಗಿ ಅಭಿಮಾನಿಯೊಬ್ರು ಕೇಳೇ ಬಿಟ್ಟಿದ್ದಾರೆ.
ಸರ್, ನಿಮ್ದು ಮತ್ತೆ ದರ್ಶನ್ ಅವರದ್ದು ಸಮಸ್ಯೆನ ಯಾವಾಗ ಸಾಲ್ವ್ ಮಾಡ್ಕೋತೀರಾ ಇನ್ನು ಎಷ್ಟು ಸಮಯ ತಗೋತೀರಾ? ಅಂತ ಕೇಳೇ ಬಿಟ್ಟಿದ್ದಾರೆ.

ಅದಕ್ಕೆ ಕಿಚ್ಚ, ಸಮಸ್ಯೆ ಏನು ಅಂತ ಇಬ್ರು ಹುಡುಕ್ತಾ ಇದ್ದೀವಿ” ಅಂತ ಜಾಣತನದ ಉತ್ತರ ಕೊಟ್ಟಿದ್ದಾರೆ.
Samasye yenu antha ibru hudukthaa idheevi.
😁 https://t.co/KCyDd8gLad— Kichcha Sudeepa (@KicchaSudeep) January 29, 2024
