ಉಡುಪಿ : ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಕೆರೆ ಮಹಾಕಾಳಿ ಅಮ್ಮನವರ ದೇವಾಸ್ಥಾನದ ಮಾರಿ ಜಾತ್ರೆ ನಡೆಯುತ್ತಿರುವ ಹಿನ್ನಲೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಜನವರಿ 30 ರ ಬೆಳಗ್ಗೆ 6 ಗಂಟೆಯಿAದ ಜ.31 ರ ರಾತ್ರಿ 12 ಗಂಟೆ ಯ ವರೆಗೆ ಕರ್ನಾಟಕ ಅಬಕಾರಿ ನಿಯಮಗಳ 1968 ರನಿಯಮ 3ರಡಿ ನೀಡಿರುವ ಮಧ್ಯ ಮಾರಾಟ ಸನ್ನದುಗಳನ್ನು ಹೊಂದಿರುವ ಅಂಗಡಿಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21 ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗಂಗೊಳ್ಳಿ ಹಾಗೂ ಗುಜ್ಜಾಡಿ ಗ್ರಾಮ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮದ್ಯ ಅಂಗಡಿಯನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
Advertisement. Scroll to continue reading.

In this article:Diksoochi news, Gangolli, gujjadi, kharvikeri kere mahakali amma temple, mari jathre, no alcohol
Click to comment

































