ಶಂಕರನಾರಾಯಣ : ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಿದ್ಧಾಪುರದಲ್ಲಿ ನಡೆದಿದೆ.
ಚಂದ್ರು (24) ಮೃತ ಯುವಕ. ಉಡುಪಿಯಿಂದ ದಾವಣಗೆರೆಗೆ ಚಂದ್ರು ಖಾಸಗಿ ಬಸ್‌ನಲ್ಲಿ ಜ. 29ರ ಬೆಳಗಿನ ಜಾವ ಪ್ರಯಾಣಿಸುತ್ತಿದ್ದರು. ಜನ್ಸಾಲೆ ಬಳಿ ಬಂದಾಗ ಅವರಿಗೆ ನಡುಕ ಪ್ರಾರಂಭಗೊಂಡಿದೆ ಎನ್ನಲಾಗಿದೆ.
Advertisement. Scroll to continue reading.

ಸಿದ್ದಾಪುರದಲ್ಲಿ ಬಸ್ ಅನ್ನು ಚಾಲಕ ನಿಲ್ಲಿಸಿದ್ದು, 108 ವಾಹನದ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದ್ದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:bus, crime news, death, jansale, karavali news, Shankar narayana, siddapura
Click to comment

































