ಹೊಸದಿಲ್ಲಿ : ಹಾಟ್ ನಟಿ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದವರು. ಪಡ್ಡೆ ಹೈದರ ನಿದ್ರೆಗೆಡಿಸಿದ್ದವರು. ಮೂಲತಃ ಉತ್ತರ ಪ್ರದೇಶದವರಾದ ಪೂನಂ ಪಾಂಡೆ, ಇದೀಗ ಗರ್ಭ ಕಂಠ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಇರುವ ತಮ್ಮ ನಿವಾಸದಲ್ಲಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ. ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು.
ಅವರ ಸಾವು ಆಘಾತ ಉಂಟು ಮಾಡಿದ್ದಲ್ಲದೆ, ಈ ಗರ್ಭಕಂಠದ ಕ್ಯಾನ್ಸರ್ ಬಗೆಗೂ ಆತಂಕ ಸೃಷ್ಠಿಸಿದೆ. ಅಲ್ಲದೇ, ಮಹಿಳೆಯರಿಗೆ ಈ ಕುರಿತ ಜಾಗೃತೆಯನ್ನು ನೀಡುವಂತಾಗಿದೆ. ಗರ್ಭ ಕಂಠ ಕ್ಯಾನ್ಸರ್ ಎಷ್ಟೊಂದು ಅಪಾಯಕಾರಿ ಅನ್ನೋದನ್ನು ಪೂನಂ ಪಾಂಡೆ ಅವರ ಸಾವು ರುಜುವಾತು ಮಾಡಿದೆ. ಏಕೆಂದರೆ, ಭಾರತ ದೇಶದಲ್ಲಿ ಪ್ರತಿ 7 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗಿ ಜೀವ ಬಿಡುತ್ತಿದ್ದಾರೆ.

2010 ರ ಅಂಕಿ ಅಂಶದ ಪ್ರಕಾರ, ಭಾರತ ದೇಶದಲ್ಲಿ ಪ್ರತಿ ವರ್ಷ 1 ಲಕ್ಷದ 30 ಸಾವಿರ ಮಹಿಳೆಯರಲ್ಲಿ ಗರ್ಭ ಕಂಠ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಈ ಪೈಕಿ 75 ಸಾವಿರ ಮಹಿಳೆಯರು ಪ್ರತಿ ವರ್ಷ ಭಾರತದಲ್ಲಿ ಜೀವ ಬಿಡುತ್ತಿದ್ದಾರೆ. ಸರಳವಾಗಿ ಹೇಳಬೇಕೆಂದರೆ ಭಾರತದಲ್ಲಿ ಪ್ರತಿ 7 ನಿಮಿಷಕ್ಕೆ ಓರ್ವ ಮಹಿಳೆ ಗರ್ಭ ಕಂಠ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. 2024ರ ಅಂಕಿ ಅಂಶ ಇನ್ನು ಹೆಚ್ಚಾಗಿರುವ ಸಾಧ್ಯತೆ ಇದೆ.
ಹೇಗೆ ಬರುತ್ತದೆ ?
ಈ ಕಾಯಿಲೆಯು ಆನುವಂಶಿಕವಾಗಿ ಬರಬಹುದು. ಇದು ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಉಂಟಾಗುತ್ತದೆ. ಈ ಸೋಂಕು ಅನೇಕ ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ದೇಹವನ್ನು ಪ್ರವೇಶಿಸಬಹುದು.
ಇದರ ಹೊರತಾಗಿಯೂ ಇನ್ನು ಕೆಲವು ಕಾರಣಗಳಿಂದಲೂ ಸಹ ಕಾಯಿಲೆ ಬರುವ ಅವಕಾಶ ಇರುತ್ತದೆ ಎನ್ನಲಾಗಿದೆ.

ಲಕ್ಷಣ :
ತುಂಬಾ ಬಿಳಿ ಸೊರಗು ಆಗುವುದು. ಬಿಳಿ ಸೊರಗಿನ ಜೊತೆಗೆ ಕೆಂಪು ಅಥವಾ ರಕ್ತಸ್ರಾವ ಆಗಿದ್ದಲ್ಲಿ ಮತ್ತು ಗಂಡ, ಹೆಂಡತಿ ಮಿಲನ ಸಮಯದಲ್ಲಿ ರಕ್ತಸ್ರಾವ ಆಗುವುದು ಈ ಮೂರು ಲಕ್ಷಣಗಳು ಗರ್ಭಕಂಠ ಕ್ಯಾನ್ಸರ್‌ನ ಸೂಚನೆಗಳಾಗಿವೆ.
ಪತ್ತೆ ಹಚ್ಚುವ ಕ್ರಮ?
ಗರ್ಭಕಂಠದ ಕ್ಯಾನ್ಸರ್ ಪತ್ತೆ ಮಾಡಲು ಪ್ಯಾಪ್ ಸ್ಮೀಯರ್ ಟೆಸ್ಟ್ ಎಂಬ ಪರೀಕ್ಷೆಯನ್ನು ಮಾಡಲಾಗುತ್ತದೆ. ಮೇಲೆ ತಿಳಿಸಿದ ರೋಗಲಕ್ಷಣಗಳ ಆಧಾರದ ಮೇಲೆ ವೈದ್ಯರು ಈ ಪರೀಕ್ಷೆಯನ್ನು ನಡೆಸುತ್ತಾರೆ. ಗರ್ಭಕಂಠದಿಂದ ಕೆಲವು ಕಣಗಳನ್ನು ಸಂಗ್ರಹಿಸಿ ಅವುಗಳನ್ನು ಪರೀಕ್ಷಿಸುವ ಮೂಲಕ ಈ ಕ್ಯಾನ್ಸರ್ ಪತ್ತೆ ಹಚ್ಚಲಾಗುತ್ತದೆ. ಅಲ್ಲದೇ, ಈ ಕ್ಯಾನ್ಸರ್ ಅನ್ನು ಪೆಲ್ವಿಕ್ ಪರೀಕ್ಷೆ ಮತ್ತು ಬಯಾಪ್ಸಿ ಮಾದರಿ ಸಂಗ್ರಹದ ಮೂಲಕ ಕಂಡು ಹಿಡಿಯಲಾಗುತ್ತದೆ.

ತಡೆಗಟ್ಟುವ ಕ್ರಮ :
ಈ ವೈರಸ್ ತಡೆಗಟ್ಟಲು 9 ರಿಂದ 26 ವರ್ಷ ವಯಸ್ಸಿನ ಮಹಿಳೆಯರಿಗೆ ಪೂರ್ವ ಲಸಿಕೆ ಇವೆ. ಅದೇ ರೀತಿಯಾಗಿ 21 ವರ್ಷ ಮೇಲ್ಪಟ್ಟ ಮಹಿಳೆಯರು ಪ್ಯಾಪ್ ಪರೀಕ್ಷೆ ಮಾಡಿಸಬಹುದು. ಇದರಿಂದ ಈ ಕ್ಯಾನ್ಸರ್‌ನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬಹುದು. ಇದಲ್ಲದೆ, ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಾರದು ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಅಧಿಕವಾಗಿ ತೆಗೆದುಕೊಳ್ಳಬಾರದು ಎಂದು ಹೇಳಲಾಗಿದೆ.
ಚಿಕಿತ್ಸೆ :
ಪ್ಯಾಪ್ಸ್ಮಿಯರ್ (Pap Smear Test), ಹೆಚ್‌ಪಿವಿ ಟೆಸ್ಟಿಂಗ್ (HPV Testing), ಕಾಲ್ಪೋಸ್ಕೋಪಿ ಬಯಾಪ್ಸಿ (Colposcopy biopsy) ಈ ಮೂರು ಗರ್ಭಕಂಠ ಸೋಂಕು ಪತ್ತೆಗೆ ಅನುಕೂಲಕಾರಿ ತಪಾಸಣಾ ವಿಧಾನವಾಗಿದೆ. ಆರಂಭಿಕ ಹಂತದಲ್ಲಿ ಇದನ್ನ ಪತ್ತೆ ಹಚ್ಚಿದ್ದಲ್ಲಿ ಇದನ್ನ ರೋಗಮುಕ್ತಗೊಳಿಸಬಹುದಾಗಿದೆ.


































