ಮಲ್ಪೆ: ಸ್ಕೂಟರ್ನ ಡಿಕ್ಕಿಯಲ್ಲಿ ಇಟ್ಟಿದ್ದ 1.5 ಲಕ್ಷ ರೂ. ನಗದನ್ನು ಕಳ್ಳನೊಬ್ಬ ಎಗರಿಸಿರುವ ಘಟನೆ ಶುಕ್ರವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ.
ಶ್ರೀಕಾರ್ ಬೋಟಿನ ರೈಟರ್ ಆಗಿದ್ದ ಶಮಿತ್ ಅವರು ಮೀನು ಮಾರಾಟದ ಬಿಲ್ಲಿನ 1.5 ಲಕ್ಷ ರೂ. ಹಣವನ್ನು ಪೌಚ್ನಲ್ಲಿ ಹಾಕಿ ಸ್ಕೂಟರ್ನ ಡಿಕ್ಕಿಯಲ್ಲಿಟ್ಟು ಬೀಗ ಹಾಕಿ ಇನ್ನೊಂದು ಮೀನು ಪಾರ್ಟಿ ಕಚೇರಿಗೆ ಹೋಗಿದ್ದರು.
ಅಲ್ಲಿಂದ ಮರಳಿ ಬಂದು ಪರಿಶೀಲಿಸಿದಾಗ ಡಿಕ್ಕಿಯಲ್ಲಿದ್ದ ಹಣದ ಪೌಚ್ ಇರಲಿಲ್ಲ. ಪಕ್ಕದ ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಓರ್ವ ವ್ಯಕ್ತಿ ಸ್ಕೂಟರಿನ ಸೀಟ್ನ್ನು ಕೈಯಲ್ಲಿ ಎತ್ತಿ ಹಣವನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
Advertisement. Scroll to continue reading.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
In this article:boat, crime news, Diksoochi news, karavali news, malpe, theft, Udupi
Click to comment

































