ಬೆಂಗಳೂರು: ಇಸ್ರೋ ಇಂದು ಸಂಜೆ ಭಾರತದ ವಿಶೇಷ ಹವಾಮಾನ ಉಪಗ್ರಹವಾದ INSAT-3DS ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮತ್ತೊಂದು ಮಹತ್ತರ ಸಾಧನೆ ಮಾಡಿದೆ.
INSAT-3DS ಯಶಸ್ವಿ ಉಡಾವಣೆ ಬಳಿಕ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ಇತರ ಇಸ್ರೋ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿದ್ದಾರೆ.

ಈ ಉಪಗ್ರಹವು ಅಸ್ತಿತ್ವದಲ್ಲಿರುವ ಕಕ್ಷೆಯಲ್ಲಿನ INSAT-3D ಮತ್ತು 3DR ಉಪಗ್ರಹಗಳಿಗೆ ಸೇವೆಗಳ ನಿರಂತರತೆಯನ್ನು ಒದಗಿಸುತ್ತದೆ ಮತ್ತು INSAT ವ್ಯವಸ್ಥೆಯ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸಂಶೋಧನಾ ಕೇಂದ್ರದಿಂದ ಇನ್ಸ್ಯಾಟ್-3ಡಿಎಸ್ ಉಪಗ್ರಹವನ್ನು ಹೊತ್ತ ಜಿಎಸ್ಎಲ್ವಿ ರಾಕೆಟ್ (GSLV Rocket) ಯಶಸ್ವಿಯಾಗಿ ನಭಕ್ಕೆ ಹಾರಿದೆ ಎಂದು ಇಸ್ರೋ ಎಕ್ಸ್ ನಲ್ಲಿ ತಿಳಿಸಿದೆ.
Advertisement. Scroll to continue reading.
