ಲಂಡನ್: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಆಗಾಗ್ಗೆ ಮೂಗು ತೂರಿಸುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಪಾಕ್ ಮೂಲದ ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಗೆ ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ಯಾನಾ ಮೀರ್ ಬ್ರಿಟನ್ ಸಂಸತ್ನಲ್ಲಿ ತಿರುಗೇಟು ನೀಡಿದ್ದಾರೆ.
ಬ್ರಿಟನ್ನ ಜಮ್ಮು ಮತ್ತು ಕಾಶ್ಮೀರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಸಂಕಲ್ಪ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ದೇಶ ಭಾರತದಲ್ಲಿ ಸ್ವತಂತ್ರವಾಗಿದ್ದೇನೆ. ಭಾರತದ ಭಾಗವಾಗಿರುವ ನನ್ನ ತವರು ನೆಲ ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದೇನೆ. ನನ್ನ ದೇಶ, ಅಭಿವೃದ್ಧಿ ಹೊಂದುತ್ತಿರುವ ನನ್ನ ಕಾಶ್ಮೀರದ ಬಗ್ಗೆ ಅಪಖ್ಯಾತಿ ಹರಡುತ್ತಿರುವ ಮಲಾಲಾರನ್ನು ನಾನು ವಿರೋಧಿಸುತ್ತೇನೆ. ಸಾಮಾಜಿಕ ಜಾಲತಾಣಗಳ ಟೂಲ್ಕಿಟ್ ಸದಸ್ಯರನ್ನು ವಿರೋಧಿಸುತ್ತೇನೆ. ಕಾಶ್ಮೀರಕ್ಕೆ ಎಂದೂ ಭೇಟಿ ನೀಡದೇ, ಎಲ್ಲೋ ಕುಳಿತು ದಬ್ಬಾಳಿಕೆ ಕಥೆಗಳನ್ನು ಸೃಷ್ಟಿಸುತ್ತಿರುವ ವಿದೇಶಿ ಮಾಧ್ಯಮಗಳನ್ನು ನಾನು ಖಂಡಿಸುತ್ತೇನೆ ಎಂದು ಯಾನಾ ಮಿರ್ ಪ್ರತಿಪಾದಿಸಿದ್ದಾರೆ. ಯಾನಾ ಅವರು ಕಾಶ್ಮೀರದ ವ್ಲಾಗರ್ ಮತ್ತು ಪತ್ರಕರ್ತೆಯೂ ಆಗಿದ್ದಾರೆ.


































