ದ್ವಾರಕಾ: ಭಾರತದ ಪ್ರಚೀನ ನಗರಿ ದ್ವಾರಕಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್ ಮಾಡಿ ಅಂಡರ್ ವಾಟರ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ನವಿಲು ಗರಿಗಳನ್ನು ಸಮುದ್ರದೊಳಗೆ ಒಯ್ದು ಶ್ರೀ ಕೃಷ್ಣನಿಗೆ ಸಮರ್ಪಿಸಿದ್ದಾರೆ.
ಈ ವಿಚಾರವಾಗಿ ಸ್ವತಃ ಪ್ರದಾನಿ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ‘ಗುಜರಾತ್ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದ್ವಾರಕಾ ನಗರದಲ್ಲಿ ಅರಬ್ಬೀ ಸಮುದ್ರದ ಪಂಚಕುಯಿ ಕರಾವಳಿ ತೀರದ ಬಳಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ‘ನೀರಿನಲ್ಲಿ ಮುಳುಗಿರುವುದು ದೈವಿಕ ಅನುಭವ ನೀಡಿದೆ’ ಎಂದಿದ್ದಾರೆ.
#WATCH | PM @narendramodi's deep sea Dwarka Darshan
PM Modi went underwater, in the deep sea and prayed at the site where the submerged city of #Dwarka is. This experience offered a rare and profound connection to India's spiritual and historical roots. @PMOIndia… pic.twitter.com/T2tI5ZASTz— DD News (@DDNewslive) February 25, 2024
ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವವಾಗಿತ್ತು. ನಾನು ಆಧ್ಯಾತ್ಮಿಕ ಭವ್ಯತೆ ಮತ್ತು ಪ್ರಾಚೀನ ಯುಗಕ್ಕೆ ಹೋದಂತೆ ಭಾಸವಾಯಿತು. ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನು ಆಶೀರ್ವದಿಸಲಿ’ ಎಂದು ಮೋದಿ ಬರೆದುಕೊಂಡಿದ್ದಾರೆ. ಅಲ್ಲದೆ ನೀರಿನಲ್ಲಿ ಮುಳುಗಿದ ಕೆಲವು ಫೋಟೊಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ದ್ವಾರಕಾದದಲ್ಲಿ ಪ್ರಧಾನಿ ಮೋದಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

