Connect with us

Hi, what are you looking for?

Diksoochi News

ರಾಜ್ಯ

ಮದುವೆ ಆನಿವರ್ಸರಿಗೆ ಗಿಫ್ಟ್ ನೀಡಿಲ್ಲ ಎಂದು ಮಲಗಿದ್ದ ಗಂಡನನ್ನು ಚಾಕುವಿನಿಂದ ಇರಿದ ಪತ್ನಿ

0

ಬೆಂಗಳೂರು: ಮದುವೆ ಆ್ಯನಿವರ್ಸರಿ ದಿನ ಪತಿ ಗಿಫ್ಟ್ ನೀಡಿಲ್ಲ ಎಂಬ ಕಾರಣಕ್ಕೆ, ಆತ ಮಲಗಿರುವಾಗ ಪತ್ನಿ ಅಡುಗೆ ಮನೆಯಲ್ಲಿ ಬಳಸುವ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಪಾರ್ಥ ಪ್ರತಿಮ್ (37) ಅವರನ್ನು ಪತ್ನಿ ರಿಯಾ ಘೋಷ್ (35) ಗಿಫ್ಟ್ ನೀಡೊಲ್ಲ ಎಂಬ ಅಕಾರಣಕ್ಕೆ ಚಾಕುವಿನಿಂದ ಇರಿದಿದ್ದಾಳೆ. ಈಗ ಆಕೆಯ ಮೇಲೆ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಎಫ್‌ಐಆ‌ರ್ ದಾಖಲಿಸಲಾಗಿದೆ.

ತೀವ್ರ ಗಾಯಗೊಂಡಿದ್ದ ಪ್ರತಿಮ್ ಪತ್ನಿಯನ್ನು ದೂರ ದೂಡಿದ್ದಾನೆ. ಬಳಿಕ ನೆರೆ ಹೊರೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ವೇಳೆ ಪ್ರತಿಮ್ ಅವರ ದೇಹದಲ್ಲಿ ಹಲವೆಡೆ ಗಾಯಗಳಾಗಿವೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!