ವಾಷಿಂಗ್ಟನ್: ಆಸ್ಕರ್ ಅವಾರ್ಡ್ ಕಾರ್ಯಕ್ರಮ ಪ್ರತಿವರ್ಷ ಒಂದಲ್ಲ ಒಂದು ಕಾರಣಕ್ಕೆ ಚರ್ಚಾ ವಿಚಾರವಾಗುತ್ತದೆ. ಕೆಲ ವರ್ಷಗಳ ಹಿಂದೆ ನಿರೂಪಕನ ಮೇಲೆ ನಟನೊಬ್ಬ ಕಪಾಳಮೋಕ್ಷ ಮಾಡಿದ್ದರು. ಈ ವರ್ಷ ಆಸ್ಕರ್ ವೇದಿಕೆಗೆ ನಟನೊಬ್ಬ ಬೆತ್ತಲಾಗಿ ಬಂದಿರುವುದು ವೈರಲ್ ಆಗಿದೆ. WWE ಸೂಪರ್ ಸ್ಟಾರ್, ಅಮೆರಿಕಾದ ನಟ ಜಾನ್ ಸೀನಾ ಆಸ್ಕರ್ ವೇದಿಕೆಗೆ ಬೆತ್ತಲಾಗಿ ಬಂದು ಅಚ್ಚರಿ ಮೂಡಿಸಿದ್ದಾರೆ.
ಜಾನ್ ಸೀನಾ ಅವರು ವಸ್ತ್ರ ವಿನ್ಯಾಸ ಪ್ರಶಸ್ತಿ ನೀಡಲು ವೇದಿಕೆ ಬಂದಿದ್ದರು. ಈ ವೇಳೆ ಅವರು ಖಾಸಗಿ ಅಂಗಕ್ಕೆ ಸ್ಟೋರಿ ಬೋರ್ಡ್ ನ್ನು ಅಡ್ಡ ಹಿಡಿದು ಬೆತ್ತಲಾಗಿ ವೇದಿಕೆಗೆ ಬಂದಿದ್ದಾರೆ. ಜಾನ್ ಸೀನಾ ಈ ರೀತಿಯಾಗಿ ಬರುವುದು ಕಾರ್ಯಕ್ರಮದ ಒಂದು ಭಾಗವಾಗಿತ್ತು. ಇದಕ್ಕಾಗಿ ಪೂರ್ವ ತಯಾರಿಯನ್ನು ನಡೆಸಲಾಗಿತ್ತು.

john cena introducing 'best costume design' NAKED at the oscars
pic.twitter.com/DVCSFDlnto— 2000s (@PopCulture2000s) March 11, 2024
ಬೆತ್ತಲಾಗಿ ವೇದಿಕೆಗೆ ಬಂದ ಜಾನ್ ಸೀನಾ ಅವರ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಾನಾ ಚರ್ಚೆಗಳು ಆರಂಭವಾಗಿದೆ. ಇದು ಮನರಂಜನೆಗೆ ಮಾತ್ರ ಎಂದು ಕೆಲವರು ಹೇಳುತ್ತಿದ್ದು, ಇನ್ನು ಕೆಲವರು ಇಂತಹ ವೇದಿಕೆಯಲ್ಲಿ ಈ ರೀತಿಯಾಗಿ ಕಾಣಿಸಿಕೊಂಡಿರುವುದು ಅಸಹ್ಯವೆಂದು ಕಮೆಂಟ್ ಮಾಡಿದ್ದಾರೆ.
96ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಯುಎಸ್‌ಎಯ ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದೆ.
ಹಾಲಿವುಡ್ ಸಿನಿರಂಗದಲ್ಲಿ ಸದ್ದು ಮಾಡಿದ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಮುಖವಾಗಿ ಕ್ರಿಸ್ಟೋಫರ್ ನೋಲನ್ ಅವರ ʼಓಪನ್ ಹೈಮರ್ʼ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

