ಕುಣಿಗಲ್ : ಹಾಸ್ಯನಟ, ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ದಂಪತಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ರಾಜ್ಯ ಹೆದ್ದಾರಿ ೩೩ ಕುರುಡಿಹಳ್ಳಿ ಸಮೀಪ ಸಂಭವಿಸಿದೆ.
ಕೊತ್ತಗೆರೆ ಹೋಬಳಿ ಕೋಡಹಳ್ಳಿಪಾಳ್ಯ ಗ್ರಾಮದ ವಾಸಿ ಜಗದೀಶ್ (೪೪) ಮೃತ ದುರ್ದೈವಿ.
ಬುಧವಾರ ಹಾಸ್ಯನಟ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ಮಾನಸ ಅವರು ತುಮಕೂರಿನಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ತನ್ನ ಗ್ರಾಮ ಹೊಳೆನರಸಿಪುರಕ್ಕೆ ಕಾರಿನಲ್ಲಿ ತೆರಳುತ್ತಿರಬೇಕಾದರೆ ಕುಣಿಗಲ್ ಕಡೆಯಿಂದ ಕೋಡಹಳ್ಳಿಪಾಳ್ಯ ಗ್ರಾಮಕ್ಕೆ ಹೋಗುತ್ತಿದ್ದ ಆಟೋ ನಡುವೆ ಅಪಘಾತ ಸಂಭವಿಸಿದೆ ಪರಿಣಾಮ ಆಟೋ ಚಾಲಕ ಗಾಯಗೊಂಡು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ, ಅಪಘಾತದಲ್ಲಿ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದೆ.

ತುಕಾಲಿ ಸಂತೋಷ್ ಇತ್ತೀಚೆಗಷ್ಟೆ ಹೊಸ ಕಾರು ಖರೀದಿಸಿದ್ದರು.

































