ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಇತಿಹಾಸ ವಿಭಾಗ ಸಹಯೋಗದಲ್ಲಿ ಆರ್ಟ್ ಕ್ಲಬ್ ಹಾಗೂ ಐಕ್ಯುಎಸಿ ವತಿಯಿಂದ ಡಾ. ಪಿ. ಗುರುರಾಜ್ ಭಟ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಏ.13 ರಂದು ಆಯೋಜಿಸಲಾಗಿದೆ.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ಮಾಲತಿ ಕೆ. ಮೂರ್ತಿ, ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಜಿಇ ಮಣಿಪಾಲದ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಆರ್.ಜಿ. ಪೈ ಸಂಶೋಧನಾ ಕೇಂದ್ರದ ಎಒ ಡಾ. ಬಿ. ಜಗದೀಶ್ ಶೆಟ್ಟಿ ಹಾಗೂ ಡಾ. ಪಿ. ಗುರುರಾಜ ಭಟ್ ಅವರ ಕುಟುಂಬಸ್ಥರು ಉಪಸ್ಥಿತರಿರುವರು.
Advertisement. Scroll to continue reading.

In this article:birth centenary, Diksoochi news, gururaj Bhat, mgm college, ಎಂಜಿಎಂ ಕಾಲೇಜು, ಜನ್ಮ ಶತಮಾನೋತ್ಸವ
Click to comment

































