Connect with us

Hi, what are you looking for?

Diksoochi News

ಕ್ರೀಡೆ

ಡ್ರೆಸ್ಸಿಂಗ್ ರೂಮ್‌ನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ: ವೈರಲ್ ಆಗುತ್ತಿದೆ ವೀಡಿಯೋ

0

ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಸೋಮವಾರ ನಡೆದ 55ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ (MI vs SRH) ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಸೂರ್ಯಕುಮಾರ್ ಯಾದವ್ ಅವರ ಅಮೋಘ ಶತಕದ ನೆರವಿನಿಂದ ಮುಂಬೈ 174 ರನ್ಗಳ ಸವಾಲಿನ ಟಾರ್ಗೆಟ್ ಅನ್ನು 17.2 ಓವರ್‌ಗಳಲ್ಲಿ ಬೆನ್ನಟ್ಟಿತು. ಮುಂಬೈ ಜಯ ಕಂಡರೂ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸಂತಸಗೊಂಡಿರಲಿಲ್ಲ. ಇವರು ಡ್ರೆಸ್ಸಿಂಗ್ ರೂಮ್ ನಲ್ಲಿ ಅಳುತ್ತಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಪ್ರಭಾವ ಬೀರಲು ವಿಫಲರಾದರು. ಇವರು ಐಪಿಎಲ್ 2024 ರಲ್ಲಿ ಅಗ್ರ ರನ್ ಗಳಿಸಿರುವವರ ಸಾಲಿನಲ್ಲಿ 17 ನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಸದ್ಯ ಕಳಪೆ ಫಾರ್ಮ್ನಿಂದ ಕಂಗಡೆಟ್ಟಿದ್ದಾರೆ. ಸೋಮವಾರ ಎಸ್ಆರ್ಹೆಚ್ ವಿರುದ್ಧ ನೀಡಿದ ಕಳಪೆ ಪ್ರದರ್ಶನದ ನಂತರ ರೋಹಿತ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಅಳುತ್ತಿರುವಂತೆ ಕಂಡುಬಂತು. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ ಕೇವಲ ಐದು ಎಸೆತಗಳನ್ನು ಆಡಿ ಒಂದು ಬೌಂಡರಿ ಗಳಿಸುವಲ್ಲಿ ಯಶಸ್ವಿಯಾದರಷ್ಟೆ. ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಹಿಟ್ ಮ್ಯಾನ್ ಹೆನ್ರಿಚ್ ಕ್ಲಾಸೆನ್‌ಗೆ ಕ್ಯಾಚ್ ನೀಡಿ ಔಟಾದರು.

Advertisement. Scroll to continue reading.

ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಉತ್ತಮ ಆರಂಭವನ್ನು ಪಡೆದಿದ್ದರು. ತನ್ನ ಮೊದಲ ಏಳು ಇನ್ನಿಂಗ್ಸ್‌ಗಳಲ್ಲಿ 297 ರನ್ ಗಳಿಸಿದರು, ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 49 ಮತ್ತು ಸಿಎಸ್‌ಕೆ ವಿರುದ್ಧ ಅಜೇಯ 105 ರನ್ ಕೂಡ ಸಿಡಿಸಿದ್ದರು. ಆದಾಗ್ಯೂ, ಮುಂದಿನ ಐದು ಪಂದ್ಯಗಳಲ್ಲಿ, ರೋಹಿತ್ ನಾಲ್ಕು ಬಾರಿ ಒಂದಂಕಿ ಸ್ಕೋರ್‌ಗಳನ್ನು ಒಳಗೊಂಡಂತೆ ಗಳಿಸಿದ್ದು ಕೇವಲ 34 ರನ್‌ಗಳನ್ನು ಮಾತ್ರ. ಐಪಿಎಲ್ 2024 ರ ಬಳಿಕ ಭಾರತೀಯ ಆಟಗಾರರು ಟಿ20 ವಿಶ್ವಕಪ್ಗಾಗಿ ಯುಎಸ್ಎಗೆ ತೆರಳುವ ಮೊದಲು ರೋಹಿತ್ ಗೆ ಫಾರ್ಮ್ ಕಂಡುಕೊಳ್ಳಲು ಇನ್ನೂ ಎರಡು ಅವಕಾಶಗಳಿವೆ. ಮುಂಬೈ ಮೇ 11 ಮತ್ತು 17 ರಂದು ಕ್ರಮವಾಗಿ ಕೆಕೆಆರ್ ಮತ್ತು ಲಖನೌ ವಿರುದ್ಧ ಆಡಲಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!