ಬೆಂಗಳೂರು: ತಮ್ಮ 40ರ ಆಸುಪಾಸಿನಲ್ಲಿದ್ದರೂ, ಎಳೆ ಹುಡುಗಿಯರಿಗೂ ಕಡಿಮೆ ಇಲ್ಲದಂತೆ ಮೈಮಾಟ ತೋರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಕಿರುತೆರೆ ನಟಿ ಜ್ಯೋತಿ ರೈ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ಅವರ ಖಾಸಗಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಾರ ಮಾಡಲು ಆರಂಭಿಸಿವೆ. ಕನ್ನಡ ಕಿರುತೆರೆಯಲ್ಲಿ ಭರ್ಜರಿ ಹೆಸರು ಮಾಡಿರುವ ನಟಿ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದಾಳೆ. ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡು ಮಾದಕತೆಯನ್ನು ತೋರಿಸುತ್ತಿದ್ದ ನಟಿಯ ತೀರಾ ಅಶ್ಲೀಲ ವಿಡಿಯೋ ದೃಶ್ಯಗಳು ಕೂಡ ಹಂಚಿಕೆಯಾಗುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಈಗ ಕಿರುತೆರೆ ನಟಿಯ ದೃಶ್ಯಗಳು ವೈರಲ್ ಆಗುತ್ತಿದ್ದು, ನಟಿಯೊಟ್ಟಿಗೆ ಇರುವುದು ಪತಿಯೋ ಅಥವಾ ಬೇರಾವ ವ್ಯಕ್ತಿಯೋ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ.

ಒಟ್ಟು ಮೂರು ಅಶ್ಲೀಲ ವಿಡಿಯೋಗಳು ಹಾಗೂ ಒಂದಷ್ಟು ಅಶ್ಲೀಲ ಫೋಟೋಗಳನ್ನು ಅನೇಕರು ಹಂಚಿಕೊಂಡಿದ್ದರು. ಎಡಿಟ್ ಬಾ ಅಭಿ ಎನ್ನುವ ಎಕ್ಸ್ ಖಾತೆಯಲ್ಲಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಬರೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಜ್ಯೋತಿ ರೈ ಸುದೀರ್ಘವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತಂತೆ ಜ್ಯೋತಿ ರೈ ಪ್ರತಿಕ್ರಿಯೆ ನೀಡದೇ ಇದ್ದರೂ, ಕೆಲವು ವ್ಯಕ್ತಿಗಳು ತಮ್ಮ ನಕಲಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ದೂರು ಕೂಡ ನೀಡಿರುವುದಾಗಿ ತಿಳಿಸಿದ್ದಾರೆ. ಹರಿದಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಫೇಕ್ ಎಂದು ಅವರು ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟ ಪಡಿಸಿದ್ದಾರೆ. ಕೆಲವರ ನಂಬರ್ ನಿಂದ ನನಗೆ ಕರೆಗಳು ಬಂದಿದ್ದವು. ಅವರೇ ಇಂದು ನನ್ನದು ಎನ್ನಲಾಗುತ್ತಿರುವ ವಿಡಿಯೋ ಮತ್ತು ಫೋಟೋ ಕಳುಹಿಸಿದ್ದಾರೆ ಎಂದು ಬರೆದಿದ್ದಾರೆ.

