ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕಣದ ಪ್ರಮುಖ ಆರೋಪಿ ಮೇಲೆ ದಾಳಿಗೆ ಯತ್ನ ನಡೆಸಿರುವ ಘಟನೆ ಮಂಗಳೂರು ಜೈಲಿನಲ್ಲಿ ನಡೆದಿದೆ.
ಆರೋಪಿ ನೌಷಾದ್ ಮೇಲೆ ಬಿ ಬ್ಯಾರಕ್‌ನ ಖೈದಿಗಳು ದಾಳಿ ಮಾಡಲು ಯತ್ನಿಸಿರುವ ಮಾಹಿತಿ ಲಭ್ಯವಾಗಿದ್ದು, ಅದೃಷ್ಟವಶಾತ್ ನೌಷಾದ್ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಇಂದು(ಮೇ.19) ನೌಷಾದ್ ನ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದರು. ಬಳಿಕ ಮೈಸೂರು ಜೈಲಿಗೆ ಶಿಫ್ಟ್ ಮಾಡಲಿದ್ದರು. ಈ ಮಧ್ಯೆ ಮಂಗಳೂರು ಜೈಲಿನಲ್ಲಿ ಯಾರನ್ನೊ ನೋಡಬೇಕು ಎಂದು ನೌಷಾದ್ ಹೇಳಿದ್ದ ಎನ್ನಲಾಗಿದೆ.
ಜೈಲಿನಲ್ಲಿ ಮತ್ತೋರ್ವ ಖೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದಾಗ ಇದ್ದಕಿದ್ದಂತೆ ನೌಷಾದ್ ಮೇಲೆ ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತು ತೂರಲಾಗಿದೆ ಎನ್ನಲಾಗಿದೆ. ಜೈಲಿನ ಸಿಬ್ಬಂದಿ ದಾಳಿ ತಪ್ಪಿಸಿದ್ದಾರೆ. ಜೈಲಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Advertisement. Scroll to continue reading.

In this article:bajpe, breakingnews, Diksoochi news, Featured, latest news, noushad, suhas shetty
Click to comment

































