ಬೆಂಗಳೂರು : ಕೊನೆಗೂ ಈ ಸಲ ಕಪ್ ನಮ್ದೆ ಎಂದು ಆರ್ ಸಿ ಬಿ ಪಂದ್ಯ ಗೆದ್ದು ಕಪ್ ತನ್ನದಾಗಿಸಿಕೊಂಡಿದೆ. 18ನೇ ಆವೃತ್ತಿ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ತಂಡ ಗೆದ್ದು ಬೀಗಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಹಿಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 184 ರನ್ಗಳಿಸಲಷ್ಟೇ ಶಕ್ತವಾಯಿತು.

ಇದರೊಂದಿಗೆ ಬರೋಬ್ಬರಿ 18 ವರ್ಷಗಳ ಬಳಿಕ ಆರ್ ಸಿ ಬಿ ಕಪ್ ಗೆದ್ದಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
Advertisement. Scroll to continue reading.

In this article:breaking news, Featured, IPL, IPL 2025, latest news, punjab kings, RCB, royal challengers of bengaluru, sports, virat kohli
Click to comment

































