ಅಹ್ಮದಾಬಾದ್ : ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತಕ್ಕೀಡಾಗಿ ಭಾರಿ ದೊಡ್ಡ ದುರಂತವೇ ಸಂಭವಿಸಿದೆ.
ಅಹಮದಾಬಾದ್ ಏರ್ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಏಕಾಏಕಿ ವಿಮಾನ ಪತನಗೊಂಡಿದೆ. ಅದರಲ್ಲಿದ್ದ 242ಮಂದಿ ಮೃತಪಟ್ಟಿದ್ದಾರೆ.
ಏರ್ಪೋರ್ಟ್ ಬಳಿ ಮೇಧಿನಿ ನಗರ್ನಲ್ಲಿ ಈ ಘಟನೆ ಸಂಭವಿಸಿದೆ. ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್ಗೆ ತೆರಳುತ್ತಿತ್ತು.
ಟೇಕ್ ಆಫ್ ಆಗುತ್ತಿದ್ದಂತೆ ವಿಮಾನ ವೈದ್ಯಕೀಯ ಹಾಸ್ಟೆಲ್ ಒಂದರ ಮೇಲೆ ಪತನವಾಗಿದೆ. ಪರಿಣಾಮ ಹಾಸ್ಟೆಲ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement. Scroll to continue reading.

In this article:ahamadbad, air crash, air india, breaking news, Gujarath, latest news, namma Kudla
Click to comment

































