ಬ್ರಹ್ಮಾವರ: ಮೀನಿನ ವಾಹನ ಪಲ್ಟಿ; ರಸ್ತೆಗೆ ಬಿದ್ದ ಮೀನಿಗೆ ಮುಗಿಬಿದ್ದ ಮಂದಿ
Published
0
ಬ್ರಹ್ಮಾವರ : ಮೀನಿನ ವಾಹನವೊಂದು ಪಲ್ಟಿಯಾಗಿ ಮೀನುಗಳು ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಘಟನೆಯಿಂದ ಚಾಲಕ ರಮೀಝ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರದಿಂದ ಉಳ್ಳಾಲಕ್ಕೆ ಮೀನು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಜನರು ಮೀನಿಗೆ ಮುಗಿ ಬಿದ್ದಿದ್ದಾರೆ. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ಸುಧಾರಿಸಿದ್ದಾರೆ.